ಲೋಯ ಸಾವಿನ ಪ್ರಕರಣ: ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವ ಪೀಠದಿಂದ ಅರ್ಜಿ ವಿಚಾರಣೆ

7

ಲೋಯ ಸಾವಿನ ಪ್ರಕರಣ: ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವ ಪೀಠದಿಂದ ಅರ್ಜಿ ವಿಚಾರಣೆ

Published:
Updated:
ಲೋಯ ಸಾವಿನ ಪ್ರಕರಣ: ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವ ಪೀಠದಿಂದ ಅರ್ಜಿ ವಿಚಾರಣೆ

ನವದೆಹಲಿ: ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಎಚ್‌.ಬಿ. ಲೋಯ ಅವರ ಶಂಕಾಸ್ಪದ ಸಾವಿನ ಪ್ರಕರಣ ಕುರಿತು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವ ಪೀಠ ಸೋಮವಾರ ವಿಚಾರಣೆ ನಡೆಸಲಿದೆ.

ಈ ಪೀಠದಲ್ಲಿ ದೀಪಕ್‌ ಮಿಶ್ರಾ ಅವರೊಂದಿಗೆ ನ್ಯಾ. ಖಾನ್ವಿಲ್ಕರ್‌ ಡಿವೈ ಚಂದ್ರಚೂದ್‌ ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ.

ಲೋಯ ಸಾವಿನ ಸ್ವತಂತ್ರ ತನಿಖೆಗೆ ಒತ್ತಾಯಿಸಿ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

2014ರ ಡಿಸೆಂಬರ್‌ 1ರಂದು ಲೋಯ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ತ್ವರಿತ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಪತ್ರಕರ್ತ ಬಿ.ಆರ್‌. ಲೋನ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಲೋಯ ವಿಚಾರಣೆ ನಡೆಸುತ್ತಿದ್ದ ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಹಲವು ಪೊಲೀಸ್‌ ಅಧಿಕಾರಿಗಳು ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆರೋಪಿಗಳಾಗಿದ್ದರು. ಹಾಗಾಗಿ, ಲೋಯ ಅವರ ನಿಗೂಢ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ಲೋನ್‌ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಎಚ್‌.ಬಿ. ಲೋಯ ಶಂಕಾಸ್ಪದ ಸಾವಿನ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠಕ್ಕೆ ವರ್ಗಾವಣೆಯಾಗಲಿದೆ. ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸಿಜೆಐ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಲು ಈ ಪ್ರಕರಣದ ಹಂಚಿಕೆ ಕೂಡ ಒಂದು ಕಾರಣವಾಗಿತ್ತು. ಎಂದು ಹೇಳಲಾಗಿದೆ.

ವಿಚಾರಣೆ ನಡೆಸಲು ಈ ಪೀಠವು ಹಿಂದೇಟು ಹಾಕಿರುವುದರಿಂದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಈ ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಬೇಕು ಎಂದು ನಿರ್ಧರಿಸಿದ್ದರು.

ಇದನ್ನೂ ಓದಿ...

‘ನ್ಯಾಯಾಧೀಶ ಲೋಯ ಸಾವು ಗಂಭೀರವಾದ ವಿಚಾರ’

ನ್ಯಾಯಾಧೀಶರಿಗೆ ₹100 ಕೋಟಿ ಲಂಚದ ಆಮಿಷ ಆರೋಪ

ಲೋಯ ಸಾವು: ಇಂದು ‘ಸುಪ್ರೀಂ’ ವಿಚಾರಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry