ಪೇಜಾವರ ಸ್ವಾಮೀಜಿಗೆ ಬೆನ್ನುಮೂಳೆ ನೋವು: ವಿಶ್ರಾಂತಿ

7

ಪೇಜಾವರ ಸ್ವಾಮೀಜಿಗೆ ಬೆನ್ನುಮೂಳೆ ನೋವು: ವಿಶ್ರಾಂತಿ

Published:
Updated:
ಪೇಜಾವರ ಸ್ವಾಮೀಜಿಗೆ ಬೆನ್ನುಮೂಳೆ ನೋವು: ವಿಶ್ರಾಂತಿ

ಉಡುಪಿ: ಪರ್ಯಾಯ ಪೀಠದಿಂದ ಇಳಿದ ತಕ್ಷಣ ಮಂತ್ರಾಲಯಕ್ಕೆ ತೆರಳಿದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ರಸ್ತೆ ಪ್ರಯಾಣ ವೇಳೆ ತೀವ್ರ ಬೆನ್ನು ಮೂಳೆ ನೋವು ಕಾಣಿಸಿಕೊಂಡಿದೆ.

ಮಂತ್ರಾಲಯ ಭೇಟಿ ಮುಗಿಸಿಕೊಂಡು ಹೈದರಾಬಾದ್‌ನಿಂದ ಮಂಗಳೂರಿಗೆ ವಿಮಾನದಲ್ಲಿ ಬರಲು ಶ್ರೀಗಳು ನಿರ್ಧರಿಸಿದ್ದರು. ಅದರಂತೆ ಹೈದರಾಬಾದ್‌ನತ್ತ ಕಾರಿನಲ್ಲಿ ತೆರಳುತ್ತಿದ್ದಾಗ ಕರ್ನೂಲ್‌ ಬಳಿ ವಾಹನ ಬಿರುಸಿನಿಂದ ರಸ್ತೆ ಉಬ್ಬು ದಾಟಿದಾಗ ಸ್ವಾಮೀಜಿ ಅವರಿಗೆ ಮೂಳೆ ನೋವು ಕಾಣಿಸಿಕೊಂಡಿತು.

ಶ್ರೀಗಳನ್ನು ಇಲ್ಲಿನ ಅಂಬಲಪಾಡಿಯಲ್ಲಿರುವ ಹೈಟೆಕ್‌ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ವೈದ್ಯರು 15 ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಅದರಂತೆ ಶ್ರೀಗಳು ಇದೀಗ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry