ದಲಿತ ಯುವಕರನ್ನು ಕೊಂದವರಿಗೆ ಗಲ್ಲು

7

ದಲಿತ ಯುವಕರನ್ನು ಕೊಂದವರಿಗೆ ಗಲ್ಲು

Published:
Updated:

ನಾಸಿಕ್: ಐದು ವರ್ಷಗಳ ಹಿಂದೆ ಅಹ್ಮದ್‌ನಗರ್ ಜಿಲ್ಲೆಯ ಸೋನಿಯಾ ಗ್ರಾಮದಲ್ಲಿ ಮೂವರು ದಲಿತ ಯುವಕರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಆರು ಆರೋಪಿಗಳಿಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯವು ಶನಿವಾರ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2013ರ ಜನವರಿ 1ರಂದು ಸಚಿನ್ ಗುರು (24), ಸಂದೀಪ್ ತನ್ವರ್ (25) ಹಾಗೂ ರಾಹುಲ್ ಕಂಡ್ರೆ (20) ಎಂಬುವವರನ್ನು ಹತ್ಯೆ ಮಾಡಲಾಗಿತ್ತು.

ಸಚಿನ್ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದ್ದ ಎಂಬ ಕಾರಣಕ್ಕೆ ಮೂವರನ್ನು ಕೊಲ್ಲಲಾಗಿತ್ತು. ನಂತರ ದೇಹಗಳನ್ನು ಕೊಚ್ಚಿಹಾಕಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry