ಪ್ರೀ ಕ್ವಾರ್ಟರ್‌ಗೆ ಪೇಸ್‌–ಪುರವ ಜೋಡಿ

7

ಪ್ರೀ ಕ್ವಾರ್ಟರ್‌ಗೆ ಪೇಸ್‌–ಪುರವ ಜೋಡಿ

Published:
Updated:

ಮೆಲ್ಬರ್ನ್‌: ಭಾರತದ ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಮತ್ತು ಪುರವ ರಾಜಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ‍ಪ್ರೀ ಕ್ವಾರ್ಟರ್‌ ಫೈನಲ್‌ ‍ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಎರಡನೇ ಸುತ್ತಿನ ಹೋರಾಟದಲ್ಲಿ ಪೇಸ್‌ ಮತ್ತು ಪುರವ 7–6, 5–7, 7–6ರಲ್ಲಿ ಬ್ರಿಟನ್‌ನ ಜೆಮಿ ಮರ‍್ರೆ ಮತ್ತು ಬ್ರೆಜಿಲ್‌ನ ಬ್ರುನೊ ಸೊರೆಸ್‌ ಜೋಡಿಗೆ ಆಘಾತ ನೀಡಿದರು.

ಡಬಲ್ಸ್‌ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಜೆಮಿ ಮತ್ತು ಸೊರೆಸ್‌ ಕ್ರಮವಾಗಿ 9 ಮತ್ತು 10ನೇ ಸ್ಥಾನಗಳಲ್ಲಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಇವರು ಗೆಲುವು ಗಳಿಸುವ ನೆಚ್ಚಿನ ಆಟಗಾರರೆನಿಸಿದ್ದರು.

ಜೆಮಿ ಮತ್ತು ಬ್ರುನೊ ಅವರಿಂದ ಎದುರಾದ ಪ್ರಬಲ ಸವಾಲನ್ನು ದಿಟ್ಟತನದಿಂದ ಮೆಟ್ಟಿನಿಂತ ಭಾರತದ ಜೋಡಿ ‘ಟೈ ಬ್ರೇಕರ್‌’ನಲ್ಲಿ ಎದುರಾಳಿಗಳ ಸವಾಲು ಮೀರಿ ಮೊದಲ ಸೆಟ್‌ ಗೆದ್ದುಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry