ನೆನಪಿನ ಬುತ್ತಿ ‘ಯಾದ ಹೈ’

7

ನೆನಪಿನ ಬುತ್ತಿ ‘ಯಾದ ಹೈ’

Published:
Updated:
ನೆನಪಿನ ಬುತ್ತಿ ‘ಯಾದ ಹೈ’

ಸಿದ್ಧಾರ್ಥ ಮಲ್ಹೋತ್ರಾ ಹಾಗೂ ರಾಕುಲ್‌ ಪ್ರೀತ್‌ ಸಿಂಗ್‌ ಅಭಿನಯದ ಅಯ್ಯಾರಿ ಚಿತ್ರದ ‘ಯಾದ್ ಹೈ’ (Yaad Hai) ಹಾಡು ಬಿಡುಗಡೆಯಾಗಿದೆ. ಬಿಡುಗಡೆಯಾದ ನಾಲ್ಕೇ ದಿನದಲ್ಲಿ 32 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 82 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ಸೂಚಿಸಿದ್ದಾರೆ.

ಪಾಲಕ್‌ ಮಚ್ಚಲ್‌ ಹಾಗೂ ಅಂಕಿತ್‌ ತಿವಾರಿ ದನಿಯಲ್ಲಿ ಮೂಡಿ ಬಂದಿರುವ ಈ ಹಾಡು ಭಾವನಾತ್ಮಕವಾಗಿದ್ದು ಸಂಗೀತದ ಮಾಧುರ್ಯವೂ ಅಭಿಮಾನಿಗಳ ಗಮನ ಸೆಳೆದಿದೆ. ಮನಸಿನಲ್ಲಿ ತುಂಬು ಪ್ರೀತಿ ಇದ್ದರೂ ಯಾವುದೋ ಕಾರಣಕ್ಕೆ ದೂರಾಗುವ ಪ್ರೇಮಿಗಳ ಭಾವನೆಯನ್ನು ಹಾಡಿನ ಮೂಲಕ ಕಟ್ಟಿಕೊಡಲಾಗಿದೆ.

‘ನೀನ್ಯಾರು’ ಎಂದು ಪ್ರಶ್ನಿಸಿ ನಾಯಕಿ ಹೊರಟು ಹೋಗುವ ಸನ್ನಿವೇಶದೊಂದಿಗೆ ಹಾಡು ಪ್ರಾರಂಭವಾಗುತ್ತದೆ. ‘ಮೊದಲ ಭೇಟಿ, ಮಾತು ಎಲ್ಲವೂ ನೆನಪಿದೆ’ ಎನ್ನುತ್ತಾ ಸಾಗುವ ಹಾಡಿನ ಪದಗುಚ್ಛಗಳು ಅಗಲಿಕೆಯ ನೋವನ್ನು ಸಾರಿ ಹೇಳುತ್ತವೆ. ಪ್ರೀತಿಯಿಂದ ದೂರಾಗುವ ನೋವಿನೊಂದಿಗೆ, ಜೊತೆಯಾಗಿದ್ದ ಕ್ಷಣಗಳ ನವಿರು ಭಾವನೆಯ ಸನ್ನಿವೇಶಗಳು ಹಾಡಿಗೆ ಜೀವತುಂಬುತ್ತವೆ.

ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ ಇರಿಸಿಕೊಂಡೂ ಗಂಭೀರವಾಗಿಯೇ ಇರುವ ಸಿದ್ಧಾರ್ಥ ಅಭಿನಯದ ಮೂಲಕ ಇಷ್ಟವಾದರೆ ರಾಕುಲ್‌ ಪ್ರೀತ್‌ ಅರೆಕ್ಷಣವೂ ಬಿಡದೆ ಮಾತನಾಡುವ, ಬದುಕನ್ನು ಎಂಜಾಯ್‌ ಮಾಡುವ ಮುಗ್ಧ ಹುಡುಗಿಯಂತೆ ಕಾಣಿಸಿಕೊಂಡು ಪ್ರೇಕ್ಷಕರ ಮನ ತುಂಬುತ್ತಾರೆ. ದೃಶ್ಯದ ಹೆಚ್ಚಿನ ಭಾಗಗಳಲ್ಲಿ ಕಣ್ಣಿನ ಮೂಲಕವೇ ಪ್ರೀತಿಯ ಕಥೆಯನ್ನು ಹೆಣೆಯಲು ಪ್ರಯತ್ನಿಸಿದಂತೆ ತೋರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry