ಎಚ್‌ಪಿಎಲ್‌: ನೈಟ್ಸ್ ಚಾಂಪಿಯನ್‌

7

ಎಚ್‌ಪಿಎಲ್‌: ನೈಟ್ಸ್ ಚಾಂಪಿಯನ್‌

Published:
Updated:
ಎಚ್‌ಪಿಎಲ್‌: ನೈಟ್ಸ್ ಚಾಂಪಿಯನ್‌

ಹುಬ್ಬಳ್ಳಿ: ಸಾವಿರಾರು ಕ್ರಿಕೆಟ್‌ ಪ್ರೇಮಿಗಳು ಸಾಕ್ಷಿಯಾಗಿದ್ದ ಹುಬ್ಬಳ್ಳಿ ಪ್ರೀಮಿಯರ್ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ಮೂರನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಹುಬ್ಬಳ್ಳಿ ನೈಟ್ಸ್ ತಂಡ ಚಾಂಪಿಯನ್‌ ಆಯಿತು.

ರಾಜನಗರದಲ್ಲಿರುವ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಭಾನುವಾರ ಹೊನಲು ಬೆಳಕಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನೈಟ್ಸ್ ಪಡೆ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 183 ರನ್‌ ಕಲೆ ಹಾಕಿತು. ಈ ತಂಡದ ಬ್ಯಾಟ್ಸ್‌ಮನ್‌ಗಳು ಮಿಂಚಿದರು.

ಸವಾಲಿನ ಗುರಿ ಎದುರು ಪರದಾಡಿದ ಬ್ಯಾಷರ್ಸ್ ತಂಡ 18.1 ಓವರ್‌ಗಳಲ್ಲಿ 118 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು.

ನೈಟ್ಸ್‌ ತಂಡದ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಲು ಬ್ಯಾಷರ್ಸ್‌ ಬ್ಯಾಟ್ಸ್‌ಮನ್‌ಗಳಿಗೆ ಆಗಲಿಲ್ಲ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸಹ ಕಾರ್ಯದರ್ಶಿ (ಕ್ರಿಕೆಟ್) ಸಂತೋಷ ಮೆನನ್‌ ಪ್ರಶಸ್ತಿ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry