ಕಪೂರ್‌ಗೆ 23ನೇ ಸ್ಥಾನ

7

ಕಪೂರ್‌ಗೆ 23ನೇ ಸ್ಥಾನ

Published:
Updated:

ಸೆಂಟೋಸಾ, ಸಿಂಗಪುರ: ಭಾರತದ ಶಿವ ಕಪೂರ್‌, ಎಸ್ಎಂಬಿಸಿ ಸಿಂಗಪುರ ಓಪನ್ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ 23ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದಾರೆ.

ಭಾನುವಾರ ನಡೆದ ನಿರ್ಣಾಯಕ ಸುತ್ತಿನಲ್ಲಿ ಶಿವ, ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲರಾದರು. ಜ್ಯೋತಿ ರಾಂಧವ ಮತ್ತು ಗಗನ್‌ಜೀತ್‌ ಭುಲ್ಲಾರ್‌, ಜಂಟಿ 27 ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಕರ್ನಾಟಕದ ಎಸ್‌.ಚಿಕ್ಕರಂಗಪ್ಪ 60ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಸ್ಪೇನ್‌ನ ಸರ್ಜಿಯೊ ಗಾರ್ಸಿಯಾ ಈ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಅವರು ಒಟ್ಟು 270 ಸ್ಕೋರ್‌ ಕಲೆಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry