ಚೆಸ್‌: ಆನಂದ್‌ಗೆ ಸೋಲು

7

ಚೆಸ್‌: ಆನಂದ್‌ಗೆ ಸೋಲು

Published:
Updated:
ಚೆಸ್‌: ಆನಂದ್‌ಗೆ ಸೋಲು

ವಿಜ್ಕ್‌ ಆ್ಯನ್‌ ಜೀ, ನೆದರ್ಲೆಂಡ್‌: ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್, ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಏಳನೇ ಸುತ್ತಿನಲ್ಲಿ ಆಘಾತ ಆನುಭವಿಸಿದರು.

ಭಾನುವಾರ ನಡೆದ ಪಂದ್ಯದಲ್ಲಿ ರಷ್ಯಾದ ವ್ಲಾದಿಮಿರ್‌ ಕ್ರಾಮ್ನಿಕ್‌, ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌ ಅವರನ್ನು ಪರಾಭವಗೊಳಿಸಿದರು.

ಈ ಸೋಲಿನೊಂದಿಗೆ ಆನಂದ್‌ ಅವರ ಆರನೇ ಪ್ರಶಸ್ತಿ ಕನಸಿಗೆ ಹಿನ್ನಡೆ ಉಂಟಾಗಿದೆ. ಆರಂಭದಿಂದಲೇ ಚುರುಕಾಗಿ ಕಾಯಿಗಳನ್ನು ಮುನ್ನಡೆಸಿದ ಕ್ರಾಮ್ನಿಕ್‌, ಭಾರತದ ಆಟಗಾರ ಮಾಡಿದ ತಪ್ಪಿನ ಲಾಭ ಎತ್ತಿಕೊಂಡು 36ನೇ ನಡೆಯಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಆರನೇ ಸುತ್ತಿನ ಅಂತ್ಯಕ್ಕೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಹೊಂದಿದ್ದ ಭಾರತದ ಆಟಗಾರ ಈಗ ಜಂಟಿ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಶಖ್ರಿಯಾರ್‌ಗೆ ಹ್ಯಾಟ್ರಿಕ್‌ ಜಯ: ಅಜರ್‌ಬೈಜಾನ್‌ನ ಶಖ್ರಿಯಾಸ್‌ ಮಮೆಡ್ಯರೊವ್‌, ಟೂರ್ನಿಯಲ್ಲಿ ಸತತ ಮೂರನೇ ಗೆಲುವು ಗಳಿಸಿದ್ದಾರೆ. ಭಾನುವಾರದ ಹಣಾಹಣಿಯಲ್ಲಿ ಶಖ್ರಿಯಾರ್‌, ಚೀನಾದ ವೀ ಫೀ ಅವರನ್ನು ಸೋಲಿಸಿದರು. ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 5.5ಕ್ಕೆ ಹೆಚ್ಚಿಸಿಕೊಂಡ ಅವರು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ನಾರ್ವೆಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌, ಚೀನಾದ ಹೌ ಯಿಫಾನ್‌ ವಿರುದ್ಧ ಗೆದ್ದರು.

ಇನ್ನೊಂದು ಪಂದ್ಯದಲ್ಲಿ ರಷ್ಯಾದ ಸರ್ಜಿ ಕರ್ಜಾಕಿನ್‌, ಅಮೆರಿಕದ ಫಾಬಿಯಾನೊ ಕರುವಾನ ಅವರನ್ನು ಪರಾಭವಗೊಳಿಸಿದರು. ಮ್ಯಾಕ್ಸಿಮ್‌ ಮಟ್ಲಾಕೊವ್‌, ಬಿ. ಅಧಿಬಾನ್‌ ಎದುರು ಡ್ರಾ ಮಾಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry