ಹೆಡ್‌ ಕಾನ್‌ಸ್ಟೆಬಲ್ ಮೇಲೆ ಹಲ್ಲೆ: 3 ವರ್ಷ ಶಿಕ್ಷೆ, ದಂಡ

7

ಹೆಡ್‌ ಕಾನ್‌ಸ್ಟೆಬಲ್ ಮೇಲೆ ಹಲ್ಲೆ: 3 ವರ್ಷ ಶಿಕ್ಷೆ, ದಂಡ

Published:
Updated:

ಬೆಂಗಳೂರು: ಕರ್ತವ್ಯನಿರತ ಹೆಡ್‌ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದ ಆವಲಹಳ್ಳಿಯ ಮುನಾವರ್ ಪಾಷಾ (37) ಎಂಬಾತನಿಗೆ ನಗರದ 2ನೇ ಎಸಿಎಂಎಂ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ₹20,000 ದಂಡ ವಿಧಿಸಿದೆ.

ಬಸವನಗುಡಿ ಸಂಚಾರ ಠಾಣೆ ಹೆಡ್‌ಕಾನ್‌ಸ್ಟೆಬಲ್ ಶಾಂತವೀರಣ್ಣ ಅವರು 2014ರ ಫೆ.2ರಂದು ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮುನಾವರ್‌ನನ್ನೂ ತಪಾಸಣೆ ಮಾಡಲು ಮುಂದಾಗಿದ್ದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಆತ, ಹೆಡ್‌ಕಾನ್‌ಸ್ಟೆಬಲ್ ಜತೆ ಜಗಳವಾಡಿ ಹಲ್ಲೆಗೈದಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದ ಬಸವನಗುಡಿ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಶಿಕ್ಷೆ ವಿಧಿಸಿದ್ದಾರೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲತಾ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry