600 ಗ್ರಾಂ ಚಿನ್ನ ಲೂಟಿ

7

600 ಗ್ರಾಂ ಚಿನ್ನ ಲೂಟಿ

Published:
Updated:

ಬೆಂಗಳೂರು: ಪದ್ಮನಾಭನಗರದ 5ನೇ ಅಡ್ಡರಸ್ತೆ ನಿವಾಸಿ ವಿ.ಕಲಾಧರ್ ರಾವ್ ಎಂಬುವರ ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ₹ 4.80 ಲಕ್ಷ ನಗದು ಹಾಗೂ 600 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ.

ಜ.11ರಂದು ಸಿಂಗಪುರಕ್ಕೆ ತೆರಳಿದ್ದ ಕಲಾಧರ್ ಕುಟುಂಬ, ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ.‌ ತಕ್ಷಣ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮೂವರು ಕಳ್ಳರು ಗೇಟಿನ ಬೀಗ ಒಡೆದು ಮನೆ ಆವರಣ ಪ್ರವೇಶಿಸಿರುವ ದೃಶ್ಯ ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಅವರ ಚಹರೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಬನಶಂಕರಿ ಪೊಲೀಸರು ಹೇಳಿದ್ದಾರೆ.

ದಿನಪತ್ರಿಕೆ, ಕಸದ ರಾಶಿ: ‘ಕಲಾಧರ್ ಅವರ ಮನೆ ಮುಂದೆ ಏಳೆಂಟು ದಿನಪತ್ರಿಕೆಗಳು ಬಿದ್ದಿದ್ದವು. ಆವರಣದ ಕಸ ಕೂಡ ಗುಡಿಸಿರಲಿಲ್ಲ. ಗೇಟ್‌ಗೂ ಬೀಗ ಹಾಕಿತ್ತು. ಈ ಅಂಶಗಳಿಂದ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಕಳ್ಳರು ಅರಿತಿದ್ದಾರೆ. ಬಳಿಕ ಸಂಚು ರೂಪಿಸಿ ಜನವರಿ 16ರ ರಾತ್ರಿ ಕನ್ನ ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry