ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಜತೆಗೆ ಮಲಯಾಳಂ ನಟಿ ಭಾವನಾ ವಿವಾಹ

7

ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಜತೆಗೆ ಮಲಯಾಳಂ ನಟಿ ಭಾವನಾ ವಿವಾಹ

Published:
Updated:
ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಜತೆಗೆ ಮಲಯಾಳಂ ನಟಿ ಭಾವನಾ ವಿವಾಹ

ಬೆಂಗಳೂರು: ಮಲಯಾಳಂ ನಟಿ ಭಾವನಾ ಸೋಮವಾರ ಮುಂಜಾನೆ ಕನ್ನಡ ಚಿತ್ರ ನಿರ್ಮಾಪಕ ನವೀನ್‌ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿರುವ ಭಾವನಾ ಮೆನನ್‌ ಬಹುದಿನಗಳ ಗೆಳೆಯ ನವೀನ್‌ ಜತೆ ತ್ರಿಶ್ಶೂರ್‌ನಲ್ಲಿ ವಿವಾಹವಾದರು. ಕೇರಳ ಶೈಲಿಯಲ್ಲಿ ತಿರುವಂಬಾಡಿ ದೇವಾಲಯದಲ್ಲಿ ನೆರವೇರಿದ ವಿವಾಹದಲ್ಲಿ ವಧು–ವರರ ಕುಟುಂಬದ ಆಪ್ತರು ಹಾಗೂ ಸ್ನೇಹಿತರು ಭಾಗಿಯಾದರು.

ಮೆಹಂದಿ ಸಂಭ್ರಮದ ಚಿತ್ರಗಳು ಭಾನುವಾರ ಸಂಜೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಚಿತ್ರರಂಗದ ಸ್ನೇಹಿತರಿಗಾಗಿ ತ್ರಿಶ್ಶೂರ್‌ನಲ್ಲೇ ಆರತಕ್ಷತೆ ಸಮಾರಂಭ ನಿಗದಿಯಾಗಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಭಾವನಾ–ನವೀನ್‌ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಭಾವನಾ ಅವರ ತಂದೆಯ ಸಾವಿನ ನಂತರ ವಿವಾಹದ ದಿನಾಂಕ ಮುಂದೂಡಲಾಗಿತ್ತು.

ಗಣೇಶ್‌–ಭಾವನಾ ಅಭಿನಯದ ರೋಮಿಯೊ ಚಿತ್ರವನ್ನು ನವೀನ್‌ ನಿರ್ಮಿಸಿದ್ದರು. ವಿಷ್ಣುವರ್ಧನ, ಟೋಪಿವಾಲಾ, ಜಾಕಿ ಸೇರಿ ಇತರೆ ಕನ್ನಡ ಚಿತ್ರಗಳಲ್ಲಿ ಭಾವನಾ ಅಭಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry