ಆಕ್ಸ್‌ಫಾಮ್‌ ವರದಿ: ದೇಶದ ಶೇ 73ರಷ್ಟು ಸಂಪತ್ತು ಶೇ 1ರಷ್ಟಿರುವ ಶ್ರೀಮಂತರ ಕೈಯಲ್ಲಿ

7

ಆಕ್ಸ್‌ಫಾಮ್‌ ವರದಿ: ದೇಶದ ಶೇ 73ರಷ್ಟು ಸಂಪತ್ತು ಶೇ 1ರಷ್ಟಿರುವ ಶ್ರೀಮಂತರ ಕೈಯಲ್ಲಿ

Published:
Updated:
ಆಕ್ಸ್‌ಫಾಮ್‌ ವರದಿ: ದೇಶದ ಶೇ 73ರಷ್ಟು ಸಂಪತ್ತು ಶೇ 1ರಷ್ಟಿರುವ ಶ್ರೀಮಂತರ ಕೈಯಲ್ಲಿ

ದಾವೋಸ್‌: ಭಾರತದಲ್ಲಿ ಆಧಾಯ ಅಸಮಾನತೆ ಹೆಚ್ಚುತ್ತಿದ್ದು, ದೇಶದಲ್ಲಿನ ಶೇ 73 ರಷ್ಟು ಸಂಪತ್ತು ಶೇ 1ರಷ್ಟಿರುವ ಶ್ರೀಮಂತರ ಬಳಿ ಇದೆ ಎಂದು ಜಾಗತಿಕ ಅಭಿವೃದ್ಧಿ ಅಧ್ಯಯನ ನಡೆಸುವ ಸರ್ಕಾರೇತರ ಸಂಸ್ಥೆ ‘ಆಕ್ಸ್‌ಫಾಮ್‌’ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷದ ಸಮೀಕ್ಷೆಯಲ್ಲಿ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 1 ರಷ್ಟಿರುವ ಶ್ರೀಮಂತರು ದೇಶದ ಶೇ 58% ರಷ್ಟು ಸಂಪತ್ತು ಹೊಂದಿದ್ದರು. ಇದು ಈ ವರ್ಷ ಶೇ 15 ರಷ್ಟು ಹೆಚ್ಚಳವಾಗಿದೆ ಎಂದು ಆಕ್ಸ್‌ಫಾಮ್‌ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ದೇಶದಲ್ಲಿ 67 ಕೋಟಿ ಬಡ ಜನರ ಸಂಪತ್ತು ಶೇ 1 ರಷ್ಟು ಮಾತ್ರ ಹೆಚ್ಚಳವಾಗಿದೆ. ಆದರೆ ಶೇ 1 ರಷ್ಟಿರುವ ಶ್ರೀಮಂತರ ಸಂಪತ್ತು ಶೇ 73 ರಷ್ಟು ಹೆಚ್ಚಳವಾಗಿರುವುದಾಗಿ ಆಕ್ಸ್‌ಫಾಮ್‌ ಹೇಳಿದೆ.

ಶೇ ಒಂದರಷ್ಟಿರುವ ಶ್ರೀಮಂತರ ಬಳಿ 20.9 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಇರುವುದು ತಿಳಿದು ಬಂದಿದೆ. ಇದು ಕೇಂದ್ರ ಸರ್ಕಾರದ 2017–18ನೇ ಸಾಲಿನ ಬಜೆಟ್‌ ಮೊತ್ತಕ್ಕೆ ಸಮನಾಗಿದೆ.

ಭಾರತದ ಆರ್ಥಿಕ ಪ್ರಗತಿ ಕೆಲವೇ ಜನರ ಕೈಯಲ್ಲಿ ಇರುವುದು ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ಆಕ್ಸ್‌ಫಾಮ್‌ ಇಂಡಿಯಾದ ಸಿಇಒ ನಿಶಾ ಅಗರ್‌ವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವ ಆರ್ಥಿಕ ವೇದಿಕೆ’ಯ (ಡಬ್ಲ್ಯೂಇಎಫ್‌) ಸಭೆಯ ಬೆನ್ನಲ್ಲೇ ‘ಆಕ್ಸ್‌ಫಾಮ್‌’ ಸಂಸ್ಥೆ, ಸಂಪತ್ತಿನ ಅಸಮಾನ ಹಂಚಿಕೆ ಕುರಿತು ‘ರಿವಾರ್ಡ್‌ ವರ್ಕ್‌ ನಾಟ್‌ ವೆಲ್ತ್‌'  ಎಂಬ ಹೆಸರಿನಲ್ಲಿ ವರದಿ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry