ವೆಚ್ಚ ಮಸೂದೆ: ಮತದಾನ ಮುಂದಕ್ಕೆ

7

ವೆಚ್ಚ ಮಸೂದೆ: ಮತದಾನ ಮುಂದಕ್ಕೆ

Published:
Updated:
ವೆಚ್ಚ ಮಸೂದೆ: ಮತದಾನ ಮುಂದಕ್ಕೆ

ವಾಷಿಂಗ್ಟನ್‌: ಅಮೆರಿಕದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿರುವುದನ್ನು ಅಂತ್ಯಗೊಳಿಸುವ‌ ಪ್ರಯತ್ನ ಸೋಮವಾರವೂ ವಿಫಲವಾ‌ಯಿತು. ಅಲ್ಪಾವಧಿಗೆ ಅಗತ್ಯವಿದ್ದ ವೆಚ್ಚ ಮಸೂದೆಯ ಮತದಾನವನ್ನು ಮುಂದೂಡಲಾಗಿದ್ದು ಬಿಕ್ಕಟ್ಟು ಮುಂದುವರಿದಿದೆ.

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಹಾಗೂ ಪ್ರತಿಪಕ್ಷ ಡೆಮಾಕ್ರಟಿಕ್‌ ಪಕ್ಷದ ನಾಯಕರ ಪ್ರಕಾರ, ಕಳೆದ ವಾರಾಂತ್ಯದಲ್ಲಿ ನಡೆದ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿತ್ತು. ಸೋಮವಾರ ವೆಚ್ಚ ಮಸೂದೆ ಮೇಲಿನ ಮತದಾನ ನಿಗದಿಯಾಗಿತ್ತು. ಆದರೆ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಗೊಂದಲ ಮುಂದುವರಿದಿದ್ದರಿಂದ, ಮತದಾನ ಮುಂದಕ್ಕೆ ಹೋಯಿತು.

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ಶನಿವಾರ ಒಂದು ವರ್ಷ ಪೂರ್ಣಗೊಳಿಸಿತ್ತು. ಆದರೆ ಶುಕ್ರವಾರ ಮಧ್ಯರಾತ್ರಿಯಿಂದಲೇ ಆಡಳಿತ ಸ್ಥಗಿತವಾಗಿತ್ತು. ಇದರಿಂದ ಸಾವಿರಾರು ಸರ್ಕಾರಿ ನೌಕರರು ಯಾವುದೇ ವೇತನವಿಲ್ಲದೇ ಸೋಮವಾರವೂ ಮನೆಯಲ್ಲಿ ಕೂರುವಂತಾಯಿತು.

ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಲು ನಡೆಸಿದ ವಿಶೇಷ ಅಧಿವೇಶನ ವಿಫಲಗೊಂಡಿತು. ಇದಾದ ಬಳಿಕ, ‘ಡೆಮಾಕ್ರಟಿಕ್‌ ಮುಂದಿಟ್ಟಿರುವ ಅಕ್ರಮ ವಲಸೆಗಾರರ ವಿಷಯದ ಬಗ್ಗೆ ಚರ್ಚಿಸಲು ಸಿದ್ಧವಿರುವುದಾಗಿ ’ರಿಪಬ್ಲಿಕನ್‌ನ ಸೆನೆಟ್‌ ಸದಸ್ಯ ಮಿಟ್ಜ್‌ ಮ್ಯಾಕೊನ್ನೆಲ್‌ ತಿಳಿಸಿದರು.

‘ಬಿಕ್ಕಟ್ಟು ಕೊನೆಗೊಳಿಸಲು ನಾನು ಪ್ರಸ್ತಾಪಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಮುಂದಾಗಿರುವುದು ಸಂತಸ ವಿಚಾರ’ ಎಂದು ಡೆಮಾಕ್ರಟಿಕ್‌ ಪ‍ಕ್ಷದ ಸೆನೆಟ್‌ ಮುಖಂಡ ಚುಕ್‌ ಶುಮರ್‌ ತಿಳಿಸಿದ್ದಾರೆ. ‘ಒಪ್ಪಂದವನ್ನು ತಲುಪಲು ಇನ್ನಷ್ಟು ಹಾದಿ ಕ್ರಮಿಸಬೇಕಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry