ಖಾಸಗಿ ಬ್ಯಾಂಕ್‌ಗಳಲ್ಲಿ ಭಿನ್ನಾಭಿಪ್ರಾಯ

7

ಖಾಸಗಿ ಬ್ಯಾಂಕ್‌ಗಳಲ್ಲಿ ಭಿನ್ನಾಭಿಪ್ರಾಯ

Published:
Updated:

ಮುಂಬೈ: ಖಾಸಗಿ ಬ್ಯಾಂಕ್‌ಗಳಲ್ಲಿ ಶೇ 100 ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಯ) ಅವಕಾಶ ಕಲ್ಪಿಸುವ ಕೇಂದ್ರ ಸರ್ಕಾರದ ಉದ್ದೇಶಿತ ಪ್ರಸ್ತಾವನೆಯ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.

‘ನೀವು ಇಷ್ಟ ಪಡುತ್ತೀರೋ, ಇಲ್ಲವೊ ಅದೊಂದು ಆರ್ಥಿಕ ನಿರ್ಧಾರ. ಆದಾಗ್ಯೂ ಶೇ 100 ರಷ್ಟು ವಿದೇಶಿ ಒಡೆತನದ ಬ್ಯಾಂಕ್‌ ಇರುವುದು ಅಷ್ಟು ಸಮಂಜಸವಲ್ಲ’ ಎಂದು ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ದೀಪಕ್‌ ಗುಪ್ತಾ ಹೇಳಿದ್ದಾರೆ.

ಯೆಸ್‌ ಬ್ಯಾಂಕ್‌ನ ರಾಣಾ ಕಪೂರ್ ಅವರು ಸರ್ಕಾರದ ಪ್ರಸ್ತಾವವನ್ನು ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ. ‘ಇದೊಂದು ಉತ್ತಮ ನಿರ್ಧಾರ. ಈಗಾಗಲೇ ಎರಡರಿಂದ ಮೂರು ಬ್ಯಾಂಕ್‌ಗಳಲ್ಲಿ ಶೇ 74 ರಷ್ಟು ಎಫ್‌ಡಿಐ ಇದೆ. ಮಾರುಕಟ್ಟೆಗೆ ತೆರೆದುಕೊಳ್ಳುವ ಉದ್ದೇಶದಿಂದ ಇದೊಂದು ಉತ್ತಮ ನಿರ್ಧಾರವಾಗಿರಲಿದೆ’ ಎಂದಿದ್ದಾರೆ.

‘ನಿರ್ಧಾರದ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ’ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಪಾರೇಶ್‌ ಸುಕ್ತನ್ಕರ್‌ ಹೇಳಿದ್ದಾರೆ.

ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಎಚ್‌ಡಿಎಫ್‌ಸಿಯಲ್ಲಿ ಸದ್ಯ ಶೇ 74 ರಷ್ಟು ಎಫ್‌ಡಿಐ ಇದೆ. ಐಸಿಐಸಿಐ ಬ್ಯಾಂಕ್‌ನಲ್ಲಿಯೂ ಶೇ 74 ರಷ್ಟು ಎಫ್‌ಡಿಐ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry