4ನೇ ವಹಿವಾಟು ದಿನವೂ ದಾಖಲೆ

7

4ನೇ ವಹಿವಾಟು ದಿನವೂ ದಾಖಲೆ

Published:
Updated:
4ನೇ ವಹಿವಾಟು ದಿನವೂ ದಾಖಲೆ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ವಹಿವಾಟಿನ ದಿನವೂ ದಾಖಲೆ ಮಟ್ಟದಲ್ಲಿ ಖರೀದಿ ಚಟುವಟಿಕೆಗಳು ನಡೆದವು.

ವಿದೇಶಿ ಬಂಡವಾಳ ಒಳಹರಿವು ನಿರಂತರವಾಗಿದೆ. ದೇಶಿ ಹೂಡಿಕೆದಾರರು ಉತ್ತಮ ಖರೀದಿ ಚಟುವಟಿಕೆ ನಡೆಸುತ್ತಿದ್ದಾರೆ. ಇದು ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರಣವಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸೋಮವಾರ 286 ಅಂಶ ಜಿಗಿತ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 35,798 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 71 ಅಂಶ ಏರಿಕೆ ಕಂಡು, ಸಾರ್ವಕಾಲಿಕ ದಾಖಲೆ ಮಟ್ಟವಾದ 10,895 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿದೆ.

‘ಕಂಪನಿಗಳ ತ್ರೈಮಾಸಿಕ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿರುವುದು, ಬಂಡವಾಳ ಹೂಡಿಕೆ ಪ್ರಮಾಣ ನಿರಂತರವಾಗಿರುವುದು ಷೇರುಪೇಟೆಗಳಲ್ಲಿ ದಾಖಲೆ ಮಟ್ಟದ ವಹಿವಾಟು ನಡೆಯುವಂತೆ ಮಾಡುತ್ತಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ದಿನದ ವಹಿವಾಟಿನಲ್ಲಿ ಟಿಸಿಎಸ್‌ ಷೇರು ಶೇ 5.36 ರಷ್ಟು ಗರಿಷ್ಠ ಏರಿಕೆ ಕಂಡಿತು. ಇದರಿಂದ ಪ್ರತಿ ಷೇರಿನ ಬೆಲೆ ₹ 3,113ಕ್ಕೆ ಏರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry