ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಸ್ವಚ್ಛತಾ ಕೆಲಸಗಾರ ಸೆರೆ

7

ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಸ್ವಚ್ಛತಾ ಕೆಲಸಗಾರ ಸೆರೆ

Published:
Updated:
ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಸ್ವಚ್ಛತಾ ಕೆಲಸಗಾರ ಸೆರೆ

ಬೆಂಗಳೂರು: ಮಹಿಳಾ ಟೆಕಿಗಳ ಅಶ್ಲೀಲ ವಿಡಿಯೊ ಹಾಗೂ ಛಾಯಾಚಿತ್ರ ತೆಗೆದ ಆರೋಪದಡಿ ಸಾಫ್ಟ್‌ವೇರ್‌ ಕಂಪನಿಯೊಂದರ ಸ್ವಚ್ಛತಾ ಕೆಲಸಗಾರ ಧರ್ಮೇಂದ್ರಕುಮಾರ್‌ ಯಾದವ್‌ (29) ಎಂಬಾತನನ್ನು ಇಂದಿರಾ ನಗರ ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ಆತ, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಇಂದಿರಾ ನಗರದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಕಂಪನಿಯ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳಲ್ಲಿ‌ ರಹಸ್ಯ ಕ್ಯಾಮೆರಾ ಇಟ್ಟು ಕೃತ್ಯ ಎಸಗುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಕಂಪನಿಯ ಸ್ವಚ್ಛತೆಗಾಗಿ ಧರ್ಮೇಂದ್ರಕುಮಾರ್‌ ಸೇರಿದಂತೆ ಐವರು ಕೆಲಸಗಾರರಿದ್ದಾರೆ. ಅವರು ನಿತ್ಯವೂ ಕಚೇರಿ, ಶೌಚಾಲಯ, ವಿಶ್ರಾಂತಿ ಕೊಠಡಿ ಸ್ವಚ್ಛ ಮಾಡುತ್ತಾರೆ. ಸ್ವಚ್ಛತೆಗಾಗಿ ಶೌಚಾಲಯಕ್ಕೆ ಹೋಗುತ್ತಿದ್ದ ಆರೋಪಿ, ರಹಸ್ಯ ಕ್ಯಾಮೆರಾ ಇಟ್ಟು ಹೊರಬರುತ್ತಿದ್ದ. ಪುನಃ ರಾತ್ರಿ ಸ್ವಚ್ಛತೆಗಾಗಿ ಶೌಚಾಲಯಕ್ಕೆ ಹೋಗಿ ಕ್ಯಾಮೆರಾ ತೆಗೆದುಕೊಂಡು ಬರುತ್ತಿದ್ದ’ ಎಂದರು.

ಪುರಾವೆ ಸಮೇತ ಸಿಕ್ಕಿಬಿದ್ದ

ಬೆಲೆಬಾಳುವ ಮೊಬೈಲ್‌ ಹೊಂದಿದ್ದ ಆತ, ಅದರ ಕ್ಯಾಮೆರಾ ಮೂಲಕ ಮಹಿಳಾ ಟೆಕಿಗಳ ಅಂಗಾಂಗಗಳ ಫೋಟೊಗಳನ್ನು ತೆಗೆಯುತ್ತಿದ್ದ. ಇತ್ತೀಚೆಗೆ ಫೋಟೊ ತೆಗೆಯುತ್ತಿದ್ದ ವೇಳೆಯಲ್ಲೇ ಮಹಿಳಾ ಟೆಕಿಯೊಬ್ಬರಿಗೆ ಸಿಕ್ಕಿಬಿದ್ದಿದ್ದ. ಆಗ, ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿದಾಗ ಆತನ ಕೃತ್ಯ ಬಯಲಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದರು.

ಮಹಿಳಾ ಟೆಕಿಗಳು ನೀಡಿದ್ದ ದೂರಿನನ್ವಯ ಆರೋಪಿಯನ್ನು ಬಂಧಿಸಿದ್ದೇವೆ. ಮೊಬೈಲ್‌ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry