ಅಮ್ಮನ ಹಬ್ಬ ಕುರಿಗಳ ವ್ಯಾಪಾರ ಬಲು ಜೋರು

7

ಅಮ್ಮನ ಹಬ್ಬ ಕುರಿಗಳ ವ್ಯಾಪಾರ ಬಲು ಜೋರು

Published:
Updated:

ತರೀಕೆರೆ: ಪಟ್ಟಣದ ಬಯಲು ರಂಗಮಂದಿರದಲ್ಲಿ ಮೂರ್ನಾಲ್ಕು ದಿನಗಳಿಂದ ಅಮ್ಮನ ಹಬ್ಬದ ಅಂಗವಾಗಿ ನಡೆಯುತ್ತಿರುವ ಕುರಿಗಳ ಮಾರಾಟ ಬಲು ಜೋರಾಗಿತ್ತು.

ಹೊಸದುರ್ಗ ತಾಲ್ಲೂಕಿನ ಅಂತರಘಟ್ಟೆಯ ಅಂತರಘಟ್ಟಮ್ಮ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಪಟ್ಟಣದಲ್ಲಿ ಕುರಿಗಳ ವಹಿವಾಟು ಜೋರಾಗಿ ನಡೆಯಿತು. ರೈತರು, ಕಾರ್ಮಿಕರು ಹಾಗೂ ವ್ಯಾಪಾರಸ್ಥರು ಹಬ್ಬದ ಸಂಭ್ರಮಕ್ಕಾಗಿ ರಾಜ್ಯ ವಿವಿಧ ಭಾಗಗಳಿಂದ ಬಂದಿದ್ದ ಕುರಿಗಳನ್ನು ಖರೀದಿ ಮಾಡಲು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

15 ಕೆ.ಜಿಯ ದಾವಣಗೆರೆ ತಳಿ, ಬಳ್ಳಾರಿ ತಳಿ, ಬೆಳಗಾಂ ತಳಿ, ಬನ್ನೂರು ತಳಿಯು ಸುಮಾರು ₹14ರಿಂದ 15 ಸಾವಿರ, ಬೆಲೆ ಇದ್ದರೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಲೋಡುಗಟ್ಟಲೇ ಬಂದಿದ್ದ ಕತ್ತೆ ಕ್ರಾಸ್ ತಳಿಯ ಕುರಿಗಳು 40ರಿಂದ 50 ಕೆ.ಜಿ ಇದ್ದವು. ತೂಗುತ್ತಿದ್ದು 15ರಿಂದ 20 ಸಾವಿರೂ ಗಳ ಅತಿ ಕಡಿಮೆ ಬೆಲೆಗೆ ಮಾರಾಟವಾದವು.

‘ಮಳೆಯಿಲ್ಲದೇ ಹಬ್ಬದ ಸಂಭ್ರಮವಿಲ್ಲ.  ಕಾಲ ಕಾಲಕ್ಕೆ ಮಳೆ ಬೆಳೆ ನೀಡಿ ರೈತರ ಕಷ್ಟವನ್ನು ದೇವಿ ನೀಗಿಸಲಿ. ಕುರಿಗಳ ಖರೀದಿಸದೇ ಬೇರೆ ದಾರಿಯಿಲ್ಲ. ನೆಂಟರಿಷ್ಟರು ಯಥೇಚ್ಛ ಸಂಖ್ಯೆಯಲ್ಲಿ ಹಬ್ಬಕ್ಕೆ ಬರುವುದರಿಂದ ಮಧ್ಯಮ ವರ್ಗದವರಿಗೆ ಹಬ್ಬ ಬಿಸಿ ತುಪ್ಪವಾಗಿದೆ ಎನ್ನುತ್ತಾರೆ’ ಗೊಬ್ಬರ ವ್ಯಾಪಾರಿ ಪರುಶುರಾಂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry