ವಾಟ್ಸ್‌ಆ್ಯಪ್‌ ಬಿಸಿನೆಸ್‌ ಆ್ಯಪ್‌

7

ವಾಟ್ಸ್‌ಆ್ಯಪ್‌ ಬಿಸಿನೆಸ್‌ ಆ್ಯಪ್‌

Published:
Updated:
ವಾಟ್ಸ್‌ಆ್ಯಪ್‌ ಬಿಸಿನೆಸ್‌ ಆ್ಯಪ್‌

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್ ನೂತನ ಬಿಸಿನೆಸ್ ಆ್ಯಪ್ ಪರಿಚಯಿಸಿದೆ. ಮಧ್ಯಮ ಮತ್ತು ಸಣ್ಣ ವ್ಯಾಪಾರಸ್ಥರನ್ನು ಗಮನದಲ್ಲಿ ಇಟ್ಟಕೊಂಡು ಈ ಹೊಸ ಆ್ಯಪ್ ರೂಪಿಸಲಾಗಿದೆ. ಈಗಾಗಲೇ ಅಮೆರಿಕ, ಇಟಲಿ, ಬ್ರಿಟನ್, ಮೆಕ್ಸಿಕೊ ದೇಶಗಳಲ್ಲಿ ಈ ಆ್ಯಪ್ ಬಳಕೆಯಲ್ಲಿದೆ. ಮುಂದಿನ ದಿನಗಳಲ್ಲಿ ವಿಶ್ವದ ಎಲ್ಲಾ ದೇಶಗಳಿಗೂ ಇದನ್ನು ಪರಿಚಯಿಸುವುದಾಗಿ ಸಂಸ್ಥೆ ತಿಳಿಸಿದೆ.

ಇದರ ಮುಖ್ಯ ಉದ್ದೇಶ ಗ್ರಾಹಕರು ಮತ್ತು ತಯಾರಕರಿಗೆ ವ್ಯಾಪಾರ ವಹಿವಾಟಿಗೆ ವೇದಿಕೆ ಕಲ್ಪಿಸಿಕೊಡುವುದಾಗಿದೆ. ಮಧ್ಯಮ ಹಾಗೂ ಸಣ್ಣ ತಯಾರಕರು ತಾವು ತಯಾರಿಸಿದ ಉತ್ಪನ್ನವನ್ನು ಮಾರಾಟ ಮಾಡಲು ಈ ಆ್ಯಪ್ ಬಳಸಿಕೊಳ್ಳಬಹುದು. ಅಲ್ಲದೆ ಗ್ರಾಹಕರಿಗೂ ಈ ವೇದಿಕೆಯಿಂದ ಹೊಸ ಉತ್ಪನ್ನಗಳ ಬಗ್ಗೆ ಮಾಹಿತಿ ತಿಳಿಯುತ್ತದೆ.

ದೇಶದಲ್ಲಿ ಶೇ 80 ರಷ್ಟು ಸಣ್ಣ ವ್ಯಾಪಾರಸ್ಥರು ಇರುವುದರಿಂದ ಇವರ ವಹಿವಾಟಿಗೆ ಇದು ಉತ್ತಮ ವೇದಿಕೆಯಾಗಿದೆ. ಅಲ್ಲದೇ ಗ್ರಾಹಕರು ಮತ್ತು ತಯಾರಕರು ಈ ವೇದಿಕೆಯ ಮೂಲಕ ನೇರವಾಗಿ ಸಂವಹನ, ಸಂವಾದ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಗೂಗಲ್ ಪ್ಲೇಸ್ಟೋರ್: business app

ಇಂಟರ್ನೆಟ್ ಇಲ್ಲದೆ ಚಾಟ್ ನಡೆಸಲು ಹೈಕ್ !

ಜಾಗತಿಕವಾಗಿ ಹಲವಾರು ಮೆಸೆಂಜರ್ ಆ್ಯಪ್‌ಗಳು ಬಳಕೆಯಲ್ಲಿವೆ. ಈ ಎಲ್ಲ ಆ್ಯಪ್‌ಗಳ ಬಳಕೆಗೆ ಮೊಬೈಲ್ ಡೇಟಾ ಅಥವಾ ಇಂಟರ್ನೆಟ್ ಬೇಕೇ ಬೇಕು. ಇನ್ನು ಮುಂದೆ ಮೊಬೈಲ್ ಡೇಟಾ ಇಲ್ಲದೆಯೇ ಹೈಕ್ ಮೆಸೆಂಜರ್ ಆ್ಯಪ್ ಬಳಕೆ ಮಾಡಬಹುದು ಎಂದು   ಕಂಪನಿಯ ಮುಖ್ಯಸ್ಥ ಕೆವಿನ್ ಮಿತ್ತಲ್ ತಿಳಿಸಿದ್ದಾರೆ.

ಬಳಕೆಯಲ್ಲಿರುವ ಎಲ್ಲ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಹೈಕ್ ಮೂಲಕ ಇಂಟರ್ನೆಟ್ ಡೇಟಾ ಇಲ್ಲದೆಯೇ ಚಾಟಿಂಗ್, ಸುದ್ದಿ ಓದುವುದು, ಸ್ಕೋರ್ ನೋಡುವುದನ್ನು ಮಾಡಬಹುದು. ಆದರೆ ವಿಡಿಯೊ, ಆಡಿಯೊ, ಚಿತ್ರಗಳನ್ನು ಬೇರೆಯವರಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಮಿತ್ತಲ್ ಹೇಳುತ್ತಾರೆ. ಇದರಿಂದ ಹೈಕ್ ಬಳಕೆದಾರರ ಸಂಖ್ಯೆಯೂ ಹೆಚ್ಚಳವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಎಸ್ಎಂ ನೆಟ್‌ವರ್ಕಿಂಗ್‌ ತಂತ್ರಜ್ಞಾನದ ಮೂಲಕ ಮೊಬೈಲ್ ಡೇಟಾ ಇಲ್ಲದೇ ಹೈಕ್ ಮೆಸೆಂಜರ್ ಬಳಕೆ ಮಾಡುವ ವಿಧಾನವನ್ನು ರೂಪಿಸಲಾಗಿದ್ದು ಇದು ಜಗತ್ತಿನಲ್ಲಿ ಮೊಟ್ಟ ಮೊದಲ ತಂತ್ರಜ್ಞಾನ ಎನ್ನಲಾಗಿದೆ. ಇಂಟೆಕ್ಸ್ ಮತ್ತು ಕಾರ್ಬನ್ ಮೊಬೈಲ್ ಫೋನ್‌ಗಳಲ್ಲೂ ಈ ಸೇವೆ ದೊರೆಯಲಿದೆ. ಇದಕ್ಕಾಗಿ ಬಿಎಸ್ಎನ್ಎಲ್, ಏರ್‌ಟೆಲ್‌, ಐಡಿಯಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಸೇವೆ ನೀಡಲಾಗುತ್ತಿದೆ.

ಗೂಗಲ್ ಪ್ಲೇಸ್ಟೋರ್: hike app

ಜಗತ್ತಿನ ಮೊದಲ ಸಾಮಾಜಿಕ ವಿಡಿಯೊ ತಾಣ

ಫೇಸ್‌ಬುಕ್‌ನ ಮಾಜಿ ನೌಕರ ದುರ್ಗೆಶ್ ಕೌಶಿಕ್ ಜಗತ್ತಿನ ಮೊಟ್ಟ ಮೊದಲ ವಿಡಿಯೊ ಸಾಮಾಜಿಕ ಜಾಲತಾಣವನ್ನು ವಿನ್ಯಾಸ ಮಾಡಿದ್ದಾರೆ. ಇಲ್ಲಿ ಬಳಕೆದಾರರು ವಿಡಿಯೊ ಮೂಲಕ ಸಂವಹನ ಮಾಡಬಹುದು. ಜತೆಗೆ, ಪ್ರಚಲಿತ ವಿದ್ಯಮಾನಗಳ ಕುರಿತು ಗುಂಪು ಚರ್ಚೆ ನಡೆಸಬಹುದಾಗಿದೆ.

ದುರ್ಗೆಶ್ ಕೌಶಿಕ್ ಫೇಸ್‌ಬುಕ್‌ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದವರು, ಸಂವಹನದ ಬಗ್ಗೆ ಸಾಕಷ್ಟು ಅನುಭವ ಹೊಂದಿರುವ ದುರ್ಗೆಶ್ ಈ ವಿಡಿಯೊ ತಾಣವನ್ನು ರೂಪಿಸಿದ್ದಾರೆ. ಫೇಸ್‌ಬುಕ್‌  ಸಂಸ್ಥೆಗೆ ರಾಜೀನಾಮೆ ಕೊಟ್ಟು ಭಾರತಕ್ಕೆ ಮರಳಿ ವಿಷ್‌ಫೈ ವಿಡಿಯೊ ಸಾಮಾಜಿಕ ಜಾಲತಾಣವನ್ನು ರೂಪಿಸಿದ್ದಾರೆ.

ವಿಷ್‌ಫೈ ಮೂಲಕ ಜನರು ವಿಡಿಯೊ ಚಾಟಿಂಗ್ ಮಾಡಬಹುದು, ತಮ್ಮ ಸುತ್ತಲೂ ನಡೆಯುವ ವಿದ್ಯಮಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಗೆಳೆಯರೊಂದಿಗೆ ಮುಖಾಮುಖಿ ಚರ್ಚೆ ಮಾಡಬಹುದು. ಇದು ಒಂದು ರೀತಿಯಲ್ಲಿ ವಿಡಿಯೊ ಕಾಲಿಂಗ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಈ ವಿಡಿಯೊ ಆ್ಯಪ್ ಉಚಿತವಾಗಿ ಲಭ್ಯವಿದೆ. ಭಾರತದಲ್ಲಿ ಈಗಾಗಲೇ 20 ಸಾವಿರ ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ.

ಗೂಗಲ್ ಪ್ಲೇಸ್ಟೋರ್: wishfie app

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry