ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

7

ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

Published:
Updated:
ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

ಮೆಲ್ಬರ್ನ್‌: ಭಾರತದ ರೋಹನ್ ಬೋಪಣ್ಣ ಮತ್ತು ಹಂಗೇರಿಯಾದ ಆಟಗಾರ್ತಿ ಟೈಮಿಯಾ ಬಾಬೊಸ್‌ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮಂಗಳವಾರ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.

ಐದನೇ ಶ್ರೇಯಾಂಕದ ಬೋಪಣ್ಣ ಮತ್ತು ಬಾಬೊಸ್ ಜೋಡಿ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 6–4, 6–4ರಲ್ಲಿ ನೇರ ಸೆಟ್‌ಗಳಿಂದ ಅಮೆರಿಕದ ವಾಣಿಯಾ ಕಿಂಗ್ ಮತ್ತು ಕ್ರೊವೇಷ್ಯಾದ ಫ್ರಾಂಕೊ ಸ್ಕೂಗರ್ ವಿರುದ್ಧ ಗೆದ್ದಿತು.

ಮೆಲ್ಬರ್ನ್‌ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಬೋಪಣ್ಣ ಜೋಡಿ ಸುಲಭದಲ್ಲಿ ಎದುರಾಳಿಯನ್ನು ಹಿಮ್ಮೆಟ್ಟಿಸಿತು. ಒಂದು ಗಂಟೆಯ ಪೈಪೋಟಿಯಲ್ಲಿ ಎದುರಾಳಿಯನ್ನು ಒತ್ತಡಕ್ಕೆ ಒಡ್ಡುವಲ್ಲಿ ಯಶಸ್ವಿಯಾದ ಇಂಡೋ–ಹಂಗೇರಿಯನ್‌ ಜೋಡಿ ಆರಂಭದಲ್ಲಿಯೇ 2–1ರಲ್ಲಿ ಮುನ್ನಡೆ ಪಡೆಯಿತು. ಎಂಟು ಏಸ್‌ಗಳನ್ನು ಸಿಡಿಸುವ ಮೂಲಕ ಗಮನಸೆಳೆಯಿತು.

ಮುಂದಿನ ಪಂದ್ಯದಲ್ಲಿ ಬೋಪಣ್ಣ ಜೋಡಿ ಶ್ರೇಯಾಂಕರಹಿತ ಸ್ಪರ್ಧಿಗಳಾದ ಕೊಲಂಬಿಯಾದ ಜುವಾನ್ ಸೆಬಾಸ್ಟಿನ್‌ ಮತ್ತು ಅಮೆರಿಕದ ಅಬಿಗಲ್‌ ಸ್ಟೇರ್ ವಿರುದ್ಧ ಆಡಲಿದೆ. ಬೋಪಣ್ಣ ಈ ವರ್ಷ ಇಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry