ಪ್ರಧಾನಿ ಮೋದಿಗೆ ಮುತ್ತಿಗೆ: ಹೆಬಸೂರ

7

ಪ್ರಧಾನಿ ಮೋದಿಗೆ ಮುತ್ತಿಗೆ: ಹೆಬಸೂರ

Published:
Updated:

ಹುಬ್ಬಳ್ಳಿ: ಬೆಂಗಳೂರಿಗೆ ಫೆಬ್ರುವರಿ 4ರಂದು ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಮುಖಂಡರು ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬಸೂರ ‘ನೀರಿನ ವಿಷಯದಲ್ಲಿ ಎಲ್ಲಾ ಪಕ್ಷಗಳು ರಾಜಕೀಯ ಮಾಡುತ್ತಿವೆ. ಇದರಿಂದ ಹೋರಾಟಗಾರರ ಪ್ರಯತ್ನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಆದ್ದರಿಂದ, ಪ್ರಧಾನಿಗೆ ಮುತ್ತಿಗೆ ಹಾಕಲು ಉತ್ತರ ಕರ್ನಾಟಕದಿಂದ ಸಾವಿರಾರು ರೈತರು ಬೆಂಗಳೂರಿಗೆ ತೆರಳಲಿದ್ದೇವೆ’ ಎಂದರು.

‘ಚುನಾವಣೆಗೂ ಮೊದಲೇ ನೀರಿನ ಸಮಸ್ಯೆ ಪರಿಹರಿಸದಿದ್ದರೆ, ಯಾವ ಪಕ್ಷಗಳನ್ನೂ ಬೆಂಬಲಿಸುವುದಿಲ್ಲ. ಸಮಿತಿ ವತಿಯಿಂದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry