ಲಿಂಗಾಯತರ ಬೃಹತ್‌ ಸಮಾವೇಶ ಫೆ.25ಕ್ಕೆ

7

ಲಿಂಗಾಯತರ ಬೃಹತ್‌ ಸಮಾವೇಶ ಫೆ.25ಕ್ಕೆ

Published:
Updated:

ಲಕ್ಷ್ಮೇಶ್ವರ: ಬರುವ ಫೆ.25ರಂದು ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ನಡೆಸುವ ಸಲುವಾಗಿ ಭಾನುವಾರ ಲಕ್ಷ್ಮೇಶ್ವರದಲ್ಲಿ ಸಮಾಜದ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಸೋಮಣ್ಣ ಮುಳಗುಂದ ಮಾತನಾಡಿ ‘ಪಂಚಮಸಾಲಿ ಸಮಾಜ ಬಾಂಧವರು ಸರ್ಕಾರದ ಸವಲತ್ತು ಪಡೆಯುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಸಂಘಟಿತರಾಗಬೇಕಾಗಿದೆ. ಸಮಾಜ ಬಾಂಧವರು ಶಿಕ್ಷಣ ಪಡೆಯುವ ಮೂಲಕ ಜಾಗೃತರಾಗಬೇಕು’ ಎಂದು ಮನವಿ ಮಾಡಿದರು.

‘ಸಮಾವೇಶದ ಯಶಸ್ವಿಗೆ ತಾಲ್ಲೂಕಿನ ಎಲ್ಲ ಗ್ರಾಮಗಳ ಸಮಾಜ ಬಾಂಧವರನ್ನು ವಿಶ್ವಾಸಕ್ಕೆ ಆಮಂತ್ರಿಸಬೇಕು. ಲಕ್ಷ್ಮೇಶ್ವರದ ಟಿಎಪಿಸಿಎಂಎಸ್ ಆವರಣದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು ಈ ಕುರಿತು 3 ತಾಲ್ಲೂಕುಗಳ ಸಮಾಜದ ಮುಖಂಡರ ಪೂರ್ವಭಾವಿ ಸಭೆಯನ್ನು ಮತ್ತೊಮ್ಮೆ ಫೆ.11ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಲಕ್ಷ್ಮೇಶ್ವರದ ಚಂಬಣ್ಣ ಬಾಳಿಕಾಯಿ ಅವರ ಜೀನಿನಲ್ಲಿ ಕರೆದು ಈ ಬಗ್ಗೆ ಚರ್ಚಿಸಲಾಗುವುದು’ ಎಂದರು.

ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ಎಸ್.ಪಿ. ಪಾಟೀಲ, ಸುರೇಶ ರಾಚನಾಯ್ಕರ, ವೀರನಗೌಡ ಪಾಟೀಲ, ಡಾ.ಎಸ್.ಬಿ. ಜವಾಯಿ, ಸಂಜೀವ ಚಾಕಲಬ್ಬಿ, ಮಹಾದೇವಗೌಡ ನರಸಮ್ಮನವರ, ಶಂಕರ ಬಾಳಿಕಾಯಿ, ಈರಣ್ಣ ಭರಮಗೌಡ್ರ, ಶರಣು ಗೋಡಿ, ಮಂಜುನಾಥ ಮಾಗಡಿ, ಬಸವರಾಜ ಹೊಗೆಸೊಪ್ಪಿನ, ಈರಣ್ಣ ಅಕ್ಕೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry