ಕಾಲುವೆಗೆ ಬಿದ್ದ ಬಸ್ಸು, ನಾಲ್ವರು ಸಾವು, 32 ಮಂದಿಗೆ ಗಾಯ

7

ಕಾಲುವೆಗೆ ಬಿದ್ದ ಬಸ್ಸು, ನಾಲ್ವರು ಸಾವು, 32 ಮಂದಿಗೆ ಗಾಯ

Published:
Updated:
ಕಾಲುವೆಗೆ ಬಿದ್ದ ಬಸ್ಸು, ನಾಲ್ವರು ಸಾವು, 32 ಮಂದಿಗೆ ಗಾಯ

ಸಂಬಲ್‌ಪುರ(ಒಡಿಶಾ):  ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಬಸ್ಸೊಂದು ಇಲ್ಲಿನ ಗೌಡಪಲ್ಲಿ ಗ್ರಾಮದಲ್ಲಿ ಮಂಗಳವಾರ ರಾತ್ರಿ  ಸೇತುವೆ ಮೇಲಿನಿಂದ ಕಾಲುವೆಗೆ ಬಿದ್ದು, ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 32 ಮಂದಿಗೆ ಗಾಯಗಳಾಗಿವೆ.

ಒಡಿಶಾ ರಾಜ್ಯದ ಸಂಬಲ್‌ಪುರ– ರಾಯರಂಗಪುರ ರಾಷ್ಟ್ರೀಯ ಹೆದ್ದಾರಿ 6 ನಲ್ಲಿ ಈ ಅಪಘಾತ ಸಂಂಭವಿಸಿದೆ. ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಾಯಗೊಂಡವರನ್ನು ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ರಿಸರ್ಚ್ ಸಂಸ್ಥೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್  ಅವರು ಅಪಘಾತದಲ್ಲಿ ಸಾವಿಗೀಡಾದವರ ನಾಲ್ವರ ಕುಟುಂಬಗಳಿಗೆ ₹2 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry