ವಿಕಾಸ್‌ ಠಾಕೂರ್‌ಗೆ ಚಿನ್ನ

7
195 ಕೆ.ಜಿ ಭಾರ ಎತ್ತಿದ ಆಳ್ವಾಸ್‌ ಕಾಲೇಜಿನ ಉಷಾಗೆ ಕಂಚು; ಬೆಳ್ಳಿ ಗೆದ್ದ ಜಗದೀಶ ವಿಶ್ವಕರ್ಮ

ವಿಕಾಸ್‌ ಠಾಕೂರ್‌ಗೆ ಚಿನ್ನ

Published:
Updated:
ವಿಕಾಸ್‌ ಠಾಕೂರ್‌ಗೆ ಚಿನ್ನ

ಮೂಡುಬಿದಿರೆ: ಹಿಮಾಚಲ ಪ್ರದೇಶದ ವಿಕಾಸ್‌ ಠಾಕೂರ್‌ ಬುಧವಾರ ನಡೆದ ರಾಷ್ಟ್ರಮಟ್ಟದ 70ನೇ ರಾಷ್ಟ್ರಮಟ್ಟದ ಪುರುಷರ ಸೀನಿಯರ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 94 ಕೆ.ಜಿ. ವಿಭಾಗದ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.

ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ವೇಟ್‌ಲಿಫ್ಟಿಂಗ್‌ ಸಂಸ್ಥೆ ಮತ್ತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಸ್ಪರ್ಧೆಯ ಪ್ರಬಲ ಪೈಪೋಟಿಯಲ್ಲಿ ವಿಕಾಸ್‌ ಥಾಕೂರ್‌ ಬಲಾಢ್ಯ ಲಿಫ್ಟರ್‌ಗಳನ್ನು ಹಿಂದಿಕ್ಕಿದರು. ಅವರು ಒಟ್ಟು 332‌ ಕೆ.ಜಿ ಭಾರ ಎತ್ತಿದರು. ಸ್ನ್ಯಾಚ್‌ ವಿಭಾಗದಲ್ಲಿ 145 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 187 ಕೆ.ಜಿ ಸಾಧನೆ ಮಾಡಿದರು.

ಸೇನಾ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ನ ಜಗದೀಶ್‌ ವಿಶ್ವಕರ್ಮ 322 ಕೆ.ಜಿ ಭಾರ ಎತ್ತಿ ಬೆಳ್ಳಿ (ಸ್ನ್ಯಾಚ್‌ 141 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ 181 ಕೆ.ಜಿ) ಗೆದ್ದರು. ಚಂಡೀಗಢದ ಸಾಹಿಲ್‌ ಶರ್ಮಾ 313 ಕೆ.ಜಿ ಭಾರ ಎತ್ತಿ ಕಂಚು (ಸ್ನ್ಯಾಚ್‌ 139 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ 174 ಕೆ.ಜಿ) ಗೆದ್ದರು.

ಫಲಿತಾಂಶ: ಮಹಿಳೆಯರು: 90 ಕೆ.ಜಿ ವಿಭಾಗ: ಅನುರಥ, ಆಲ್‌ ಇಂಡಿಯಾ ಪೊಲೀಸ್‌ ಸರ್ವೀಸ್‌ ಕಂಟ್ರೋಲ್‌ ಬೋರ್ಡ್‌ (ಸ್ನ್ಯಾಚ್‌ 97 ಕೆ.ಜಿ., ಕ್ಲೀನ್ ಮತ್ತು ಜರ್ಕ್ 115 ಕೆ.ಜಿ. ಒಟ್ಟು: 212 ಕೆ.ಜಿ)–1,  ಅನು, ಪಂಜಾಬ್‌, (ಸ್ನ್ಯಾಚ್‌ 93 ಕೆ.ಜಿ., ಕ್ಲೀನ್ ಮತ್ತು ಜರ್ಕ್ 114 ಕೆ.ಜಿ. ಒಟ್ಟು: 207 ಕೆ.ಜಿ)–2, ಉಷಾ ಕೆ.ಎನ್‌, ಆಳ್ವಾಸ್‌ ಕಾಲೇಜು ಕರ್ನಾಟಕ (ಸ್ನ್ಯಾಚ್‌ 87 ಕೆ.ಜಿ., ಕ್ಲೀನ್ ಮತ್ತು ಜರ್ಕ್ 108 ಕೆ.ಜಿ. ಒಟ್ಟು: 195 ಕೆ.ಜಿ)–3.

75 ಕೆ.ಜಿ.: ರೀನಾ, ಹರಿಯಾಣ (ಸ್ನ್ಯಾಚ್‌ 92 ಕೆ.ಜಿ., ಕ್ಲೀನ್ ಮತ್ತು ಜರ್ಕ್ 117 ಕೆ.ಜಿ. ಒಟ್ಟು: 209 ಕೆ.ಜಿ)–1, ಮನ್‌ಪ್ರೀತ್‌ ಕೌರ್‌, ಪಂಜಾಬ್‌ (ಸ್ನ್ಯಾಚ್‌ 90 ಕೆ.ಜಿ., ಕ್ಲೀನ್ ಮತ್ತು ಜರ್ಕ್ 110 ಕೆ.ಜಿ. ಒಟ್ಟು: 200 ಕೆ.ಜಿ) –2, ದೀಪಿಕಾ ಹಂದಾ,  ಆಲ್‌ ಇಂಡಿಯಾ ಪೊಲೀಸ್‌ ಸರ್ವೀಸ್‌ ಕಂಟ್ರೋಲ್‌ ಬೋರ್ಡ್‌ (ಸ್ನ್ಯಾಚ್‌ 83 ಕೆ.ಜಿ., ಕ್ಲೀನ್ ಮತ್ತು ಜರ್ಕ್ 116 ಕೆ.ಜಿ. ಒಟ್ಟು: 199 ಕೆ.ಜಿ)–3.

85 ಕೆ.ಜಿ ಪುರುಷರ ವಿಭಾಗ: ಆರ್‌ ವಿ. ರಾಹುಲ್‌, ರೈಲ್ವೇಸ್‌, (ಸ್ನ್ಯಾಚ್‌ 148 ಕೆ.ಜಿ., ಕ್ಲೀನ್ ಮತ್ತು ಜರ್ಕ್ 187 ಕೆ.ಜಿ. ಒಟ್ಟು: 335 ಕೆ.ಜಿ)–1, ಹರ್ಷದ ವಾಡೇಕರ್‌, ಮಹಾರಾಷ್ಟ್ರ (ಸ್ನ್ಯಾಚ್‌ 145 ಕೆ.ಜಿ., ಕ್ಲೀನ್ ಮತ್ತು ಜರ್ಕ್ 180 ಕೆ.ಜಿ. ಒಟ್ಟು: 325 ಕೆ.ಜಿ)–2, ಕೆ. ರವಿಕುಮಾರ್‌, ಎಐಪಿಎಸ್‌ಸಿ,(ಸ್ನ್ಯಾಚ್‌ 146 ಕೆ.ಜಿ., ಕ್ಲೀನ್ ಮತ್ತು ಜರ್ಕ್ 177 ಕೆ.ಜಿ. ಒಟ್ಟು: 323 ಕೆ.ಜಿ)–3.

‘ತೀವ್ರವಾದ ಹಣಾಹಣಿ ಇತ್ತು. ಅದನ್ನು ಮೀರಿ ಸಾಧನೆ ಮಾಡಿದ್ದೇನೆ. ಉತ್ತಮ ದಾಖಲೆ ಮಾಡಬೇಕು ಎನ್ನುವ ಆಸೆಗೆ ಹಿನ್ನಡೆ ಆಯಿತು. ಬರುವ ದಿನಗಳಲ್ಲಿ ಮತ್ತಷ್ಟು ತಯಾರಿ ಮಾಡಿಕೊಳ್ಳುತ್ತೇನೆ. ಚಿನ್ನದ ಪದಕ ಗೆದ್ದಿರುವುದು ಮತ್ತಷ್ಟು ಆತ್ಮಸ್ಥೈರ್ಯ ಹೆಚ್ಚಿಸಿದೆ’ ಎಂದು 25 ವರ್ಷದ ವೇಟ್‌ ಲಿಫ್ಟರ್‌ ವಿಕಾಸ್‌ ಠಾಕೂರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚಂಡೀಗಡದಲ್ಲಿ ಚಿನ್ನ ದಾಖಲಿಸಿದ್ದ ಉಷಾ

ಆಳ್ವಾಸ್‌ ಕಾಲೇಜಿನ ಉಷಾ ಕೆ.ಎನ್‌, ಈಚೆಗೆ ಚಂಡೀಗಡದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು 90 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry