ಎಟಿಕೆಗೆ ಚೆನ್ನೈಯಿನ್ ಎಫ್‌ಸಿ ಸವಾಲು

7
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌

ಎಟಿಕೆಗೆ ಚೆನ್ನೈಯಿನ್ ಎಫ್‌ಸಿ ಸವಾಲು

Published:
Updated:
ಎಟಿಕೆಗೆ ಚೆನ್ನೈಯಿನ್ ಎಫ್‌ಸಿ ಸವಾಲು

ಕೋಲ್ಕತ್ತಾ: ಮೂರು ವರ್ಷಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದು ಬೀಗಿದದ್ದ ಅಟ್ಲೆಟಿಕೊ ಡಿ ಕೋಲ್ಕತ್ತ (ಎಟಿಕೆ) ತಂಡದ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ಈ ಬಾರಿ ಸಂಕಷ್ಟಕ್ಕೆ ಒಳಗಾಗಿದೆ. ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಈ ತಂಡ ಚೆನ್ನೈಯಿನ್‌ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಎದುರಿಸಲಿದೆ.

ಈ ವರೆಗೆ ಆಡಿದ 10 ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಗೆದ್ದಿರುವ ಎಟಿಕೆ 12 ಪಾಯಿಂಟ್ ಗಳಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹೀಗಾಗಿ ತವರಿನಲ್ಲಿ ನಡೆಯಲಿರುವ ಪಂದ್ಯ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದ್ದು ಗೆಲುವಿವಾಗಿ ಪಣತೊಟ್ಟು ಅಂಗಣಕ್ಕೆ ಇಳಿಯಲಿದೆ.

ಚೆನ್ನೈಯಿನ್ ಎಫ್‌ಸಿ ತಂಡ 11 ಪಂದ್ಯಗಳ ಪೈಕಿ ಆರನ್ನು ಗೆದ್ದಿದ್ದು 20 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳ ಅಮಾನತಿನ ನಂತರ ತಂಡದ ಕೋಚ್ ಜಾನ್ ಗ್ರೆಗರಿ ಮರಳಿರುವುದರಿಂದ ಆಟಗಾರರ ನೈತಿಕ ಬಲ ಹೆಚ್ಚಿದೆ. ಕಳೆದ ಪಂದ್ಯದಲ್ಲಿ ನಾರ್ತ್‌ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಸೋತಿರುವುದರಿಂದ ಗೆಲುವಿನ ಲಯಕ್ಕೆ ಮರಳಲು ತಂಡಕ್ಕೆ ಇದು ಉತ್ತಮ ಅವಕಾಶ.

ಗುರುವಾರದ ಪಂದ್ಯವನ್ನು ಸುಲಭವಾಗಿ ಕಾಣಲು ಎಟಿಕೆ ಸಿದ್ಧವಿಲ್ಲ. ಈ ಪಂದ್ಯ ಅತ್ಯಂತ ಸವಾಲಿನದ್ದು ಎಂದು ಕೋಚ್‌ ಗ್ರಗರಿ ಅಭಿಪ್ರಾಯಪಟ್ಟಿದ್ದಾರೆ. ‘ಎಟಿಕೆಯನ್ನು ಭಾರತದ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಎಂದೇ ನಮ್ಮ ತಂಡ ಪರಿಗಣಿಸಿದೆ. ಈ ತಂಡದ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿದೆ. ಹೀಗಾಗಿ ಬಲಿಷ್ಠ ಪಡೆಯನ್ನೇ ಕಣಕ್ಕೆ ಇಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಪಂದ್ಯ ಆರಂಭ: ರಾತ್ರಿ 8.00

ಸ್ಥಳ: ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ, ಕೋಲ್ಕತ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry