ರಾಜ್ಯದ 23 ಪೊಲೀಸರಿಗೆ ರಾಷ್ಟ್ರಪತಿ ಪದಕ

7

ರಾಜ್ಯದ 23 ಪೊಲೀಸರಿಗೆ ರಾಷ್ಟ್ರಪತಿ ಪದಕ

Published:
Updated:

ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಹಾಗೂ ಶ್ಲಾಘನೀಯ ಸೇವಾ ಪ್ರಶಸ್ತಿಗೆ ರಾಜ್ಯದ 23 ಪೊಲೀಸರು ಭಾಜನರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ: ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗದ ಡಿಐಜಿ ಡಾ.ಬಿ.ಎ.ಮಹೇಶ್, ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಹಾಗೂ ಬೆಂಗಳೂರು ಉತ್ತರ ಉಪವಿಭಾಗದ (ಸಂಚಾರ) ಎಸಿಪಿ ಜಿ.ಎ.ಜಗದೀಶ್.‌

ಶ್ಲಾಘನೀಯ ಸೇವಾ ಪದಕ:  ಬೆಳಗಾವಿ ಲೋಕಾಯುಕ್ತ ಎಸ್ಪಿ ರವಿಕುಮಾರ್ ಎಚ್.ನಾಯ್ಕ್, ಗುಪ್ತದಳ ಎಸ್ಪಿ ಹಮ್ಜಾ ಹುಸೇನ್, ಬಾಣಸವಾಡಿ ಎಸಿಪಿ ಕೆ.ಪಿ.ರವಿಕುಮಾರ್, ಚಿಂಚೋಳಿ ಡಿವೈಎಸ್ಪಿ ಯು.ಶರಣಪ್ಪ, ಸೋಮವಾರಪೇಟೆ ಡಿವೈಎಸ್ಪಿ ಸಿ.ಸಂಪತ್ ಕುಮಾರ್, ಹುಬ್ಬಳ್ಳಿ ಎಸಿಪಿ ನಿಂಗಪ್ಪ ಬಿ.ಸಕ್ರಿ. ಎಸಿಬಿ ಡಿವೈಎಸ್ಪಿ ಬಿ.ಬಾಲರಾಜ್. ತುಮಕೂರು ಡಿವೈಎಸ್ಪಿ ಕೆ.ಎಸ್.ನಾಗರಾಜ್.

ಚಿಕ್ಕಮಗಳೂರು ಇನ್‌ಸ್ಪೆಕ್ಟರ್ ಕೆ.ಸತ್ಯನಾರಾಯಣ್, ಬೆಂಗಳೂರು ಕೆಎಸ್‌ಆರ್‌ಪಿ ಎಸ್‌ಐ ಜಗನ್ನಾಥ್. ಎಸ್‌ಸಿಆರ್‌ಬಿ ಎಎಸ್‌ಐಗಳಾದ ವಿ.ಎನ್.ಗುಣವತಿ ಹಾಗೂ ಕೆ.ಆರ್.ವಿನುತಾ, ಬೆಂಗಳೂರಿನ ಹೆಡ್ ಕಾನ್‌ಸ್ಟೆಬಲ್‌ಗಳಾದ ಜಿ.ಶ್ರೀನಿವಾಸ್‌ ಶೆಟ್ಟಿ, ಬಿ.ಎಚ್.ಹೇಮಕುಮಾರ್, ಪಿ.ಮಲ್ಲಿಕಾರ್ಜುನ್‌ ಹೆಗ್ಡೆ.

ಕೋಲಾರದ ಹೆಡ್ ಕಾನ್‌ಸ್ಟೆಬಲ್ ಬಿ.ಎನ್.ಮೆಹಬೂಬ್, ಹುಬ್ಬಳ್ಳಿ ಗ್ರಾಮಾಂತರ ಠಾಣೆ ಹೆಡ್ ಕಾನ್‌ಸ್ಟೆಬಲ್ ಲಚಿರಾಮ್ ಪ್ರಸಾದ್ ಪಾಠಕ್, ಮಂಗಳೂರು ಹೆಡ್ ಕಾನ್‌ಸ್ಟೆಬಲ್ ಕೆ.ಕಮಲಾಕ್ಷ, ಮೈಸೂರು ಸಿಎಆರ್ ಹೆಡ್ ಕಾನ್‌ಸ್ಟೆಬಲ್ ಎಂ.ಕೃಷ್ಣೋಜಿರಾವ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry