ಒಂದಾಗಿ ಒಂದೇ ವೇದಿಕೆಯಲ್ಲಿ ನಿಂತು ನಮ್ಮ ಹಕ್ಕುಗಳಿಗಾಗಿ ಹೋರಾಡೋಣ: ಪ್ರಕಾಶ್‌ ರೈ

7

ಒಂದಾಗಿ ಒಂದೇ ವೇದಿಕೆಯಲ್ಲಿ ನಿಂತು ನಮ್ಮ ಹಕ್ಕುಗಳಿಗಾಗಿ ಹೋರಾಡೋಣ: ಪ್ರಕಾಶ್‌ ರೈ

Published:
Updated:
ಒಂದಾಗಿ ಒಂದೇ ವೇದಿಕೆಯಲ್ಲಿ ನಿಂತು ನಮ್ಮ ಹಕ್ಕುಗಳಿಗಾಗಿ ಹೋರಾಡೋಣ: ಪ್ರಕಾಶ್‌ ರೈ

ಬೆಂಗಳೂರು: 'ಮಹದಾಯಿ ನದಿ ನೀರಿನ ಮೇಲೆ ಕನ್ನಡಿಗರ ಹಕ್ಕಿದೆ, ಅದು ಅವರ ಮೂಲಭೂತ ಹಕ್ಕು. ಮಹಾದಾಯಿ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸರ್ಕಾರಗಳು ರಾಜಕೀಯ ಮಾಡುವುದನ್ನು ಮೊದಲು ಬಿಡಬೇಕು' ಎನ್ನುವ ಮೂಲಕ ಮಹದಾಯಿ ಹೋರಾಟಕ್ಕೆ ನಟ ಪ್ರಕಾಶ್‌ ರೈ ಬೆಂಬಲ ಸೂಚಿಸಿದ್ದಾರೆ.

ಇದು ಬಗೆಹರಿಸಲಾಗದ ಸಮಸ್ಯೆಯಲ್ಲ. ಒಂದಾಗಿ ಒಂದೇ ವೇದಿಕೆಯಲ್ಲಿ ನಿಂತು ನಮ್ಮ ಹಕ್ಕುಗಳಿಗಾಗಿ ಹೋರಾಡಿ, ಸಾಧಿಸೋಣ ಎಂದು ರಾಜಕಾರಣಿಗಳಿಗೆ ಹೋರಾಟದಲ್ಲಿ ಭಾಗಿಯಾಗಲು ಆಹ್ವಾನಿಸಿದ್ದಾರೆ

ಪ್ರಜಾಪ್ರಭುತ್ವದಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಜನರಿಗಾಗಿ ಕೆಲಸ ಮಾಡುವ ಸರ್ಕಾರವಾಗುತ್ತದೆ. ರಾಜಕೀಯ ಪಕ್ಷವಾಗಿ ಅಧಿಕಾರ ಬಳಸಿ ನೀರು ತರುತ್ತೇನೆ ಎಂಬುದು ಅಪ್ಪಟ ಸುಳ್ಳು.

ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಬಿಡಬೇಕು. ಜನರ ಮೂಲಭೂತ ಹಕ್ಕುಗಳ ವಿಚಾರದಲ್ಲಿ ರಾಜಕೀಯ ಬೇಡ. ಎಲ್ಲ ರಾಜಕಾರಣಿಗಳು ತಮ್ಮ ಸಿದ್ಧಾಂತಗಳನ್ನು ಬದಿಗಿಟ್ಟು, ವೋಟಿಗಾಗಿ ಬೇಡುವುದನ್ನು ಬಿಟ್ಟು, ಜನಪರವಾಗಿ ಹೋರಾಟದಲ್ಲಿ ನಿಲ್ಲಬೇಕು ಎಂದು ಟ್ವಿಟರ್‌ ವಿಡಿಯೊದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry