ಶ್ರೀದೇವಿ ತುಟಿಯೂ... ಶಸ್ತ್ರಚಿಕಿತ್ಸೆಯೂ...

7

ಶ್ರೀದೇವಿ ತುಟಿಯೂ... ಶಸ್ತ್ರಚಿಕಿತ್ಸೆಯೂ...

Published:
Updated:
ಶ್ರೀದೇವಿ ತುಟಿಯೂ... ಶಸ್ತ್ರಚಿಕಿತ್ಸೆಯೂ...

ಬೆಂಗಳೂರು: ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿ ಇದೀಗ ಟ್ರೋಲ್ ಆಗಿದ್ದಾರೆ. ಇದಕ್ಕೆ ಕಾರಣ ಅವರ ತುಟಿ ಮತ್ತು ಶಸ್ತ್ರಚಿಕಿತ್ಸೆ!

ಹೌದು, ಮೋಹಕ ತಾರೆ ಶ್ರೀದೇವಿ ತುಟಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಎರಡು ಫೋಟೊಗಳು ಹರಿದಾಡುತ್ತಿವೆ. ಅವುಗಳಲ್ಲಿ ಒಂದು ಫೋಟೊ ಶಸ್ತ್ರಚಿಕಿತ್ಸೆಯ ಮೊದಲಿನದ್ದು ಮತ್ತು ನಂತರದ್ದು.

ಇತ್ತೀಚೆಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರ ತುಟಿಗಳು ಮತ್ತು ಕೆನ್ನೆಗಳು ಅಂದವಾಗಿ ಕಾಣುತ್ತಿದ್ದವು. ಈ ಹಿಂದೆ ತುಟಿಗಳು ಸ್ವಲ್ಪ ಊದಿಕೊಂಡಂತೆ ಕಾಣುತ್ತಿದ್ದವು. ಹಾಗಾಗಿ ಶ್ರೀದೇವಿ ತುಟಿಗಳಿಗೆ ಶಸ್ತ್ರಚಕಿತ್ಸೆ ಮಾಡಿದ್ದಾರೆ ಎಂದು ಅಭಿಮಾನಿಗಳು ನಂಬಿದ್ದಾರೆ.

ಅವರು ಪದೇ ಪದೇ ಮೂಗು ಮತ್ತು ತುಟಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಹರಿದಾಡಿದ್ದವು.  ಇಂಗ್ಲಿಷ್–ವಿಂಗ್ಲಿಷ್ ಸಿನಿಮಾ ಬಿಡುಗಡೆಯಾದಾಗ ಅವರು ಮೂಗಿಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಅಂದಿನ ಶಸ್ತ್ರಚಿಕಿತ್ಸೆಯ ಮಾತುಗಳಿಗೆ ತೆರೆ ಎಳೆದು ’ನಾನು ಯಾವುದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ, ವಾರದಲ್ಲಿ ನಾಲ್ಕು ಸಲ ಟೆನಿಸ್ ಆಡುತ್ತೇನೆ ಹಾಗೂ ನಿತ್ಯ ಪವರ್ ಯೋಗ ಮಾಡುತ್ತೇನೆ’  ಎಂದು ಹೇಳಿದ್ದರು.

ಆದರೆ ಕಳೆದ ಎರಡು ದಿನಗಳ ಶಸ್ತ್ರಚಿಕಿತ್ಸೆಯ ಟ್ರೋಲ್ ಬಗ್ಗೆ ಶ್ರೀದೇವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry