ಬಿಎಫ್‌ಸಿಗೆ ನಾರ್ತ್ ಈಸ್ಟ್‌ ಸವಾಲು

7

ಬಿಎಫ್‌ಸಿಗೆ ನಾರ್ತ್ ಈಸ್ಟ್‌ ಸವಾಲು

Published:
Updated:
ಬಿಎಫ್‌ಸಿಗೆ ನಾರ್ತ್ ಈಸ್ಟ್‌ ಸವಾಲು

ಬೆಂಗಳೂರು: ಟೂರ್ನಿಯುದ್ದಕ್ಕೂ ಉತ್ತಮ ಆಟ ಆಡಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಮತ್ತೆ ತವರಿನಲ್ಲಿ ಸಾಮರ್ಥ್ಯ ಮೆರೆಯಲು ಸಜ್ಜಾಗಿದೆ.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆಯುವ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಪಂದ್ಯದಲ್ಲಿ ಈ ತಂಡ ನಾರ್ತ್‌ ಈಸ್ಟ್‌ ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ (ಎನ್‌ಇಯುಎಫ್‌ಸಿ) ವಿರುದ್ಧ ಸೆಣಸಲಿದ್ದು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದೆ.

ಒಟ್ಟು 11 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು 21 ಪಾಯಿಂಟ್‌ ಗಳಿಸಿರುವ ಬಿಎಫ್‌ಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ಪುಣೆ ಎಫ್‌ಸಿ ಬಗಲಲ್ಲಿ ಬಿಎಫ್‌ಸಿಗಿಂತ ಒಂದು ಪಾಯಿಂಟ್ ಹೆಚ್ಚು ಇದೆ. ‌

ನಾರ್ತ್‌ ಈಸ್ಟ್ ತಂಡದ ತವರು ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಪ್ರಯಾಸದ ಗೆಲುವು (1–0) ಸಾಧಿಸಿತ್ತು.  ಇದೀಗ ನಾರ್ತ್‌ ಈಸ್ಟ್ ತಂಡವು ತಿರುಗೇಟು ನೀಡುವ ತವಕದಲ್ಲಿದೆ.

‘ಗುವಾಹಟಿಯಲ್ಲಿ ಭಾರಿ ಸವಾಲು ಎದುರಾಗಿತ್ತು. ನಾರ್ತ್‌ ಈಸ್ಟ್ ಬಲಶಾಲಿಯಾಗಿದೆ ಎಂಬುದು ಆ ಪಂದ್ಯದಿಂದ ಸಾಬೀತಾಗಿತ್ತು. ಈ ಅಂಶವನ್ನು ಗಮದಲ್ಲಿರಿಸಿಕೊಂಡೇ ತಂಡ ಶುಕ್ರವಾರ ಕಣಕ್ಕೆ ಇಳಿಯಲಿದೆ’ ಎಂದು ಕೋಚ್ ಆ‌ಲ್ಬರ್ಟ್ ರೋಕಾ ಹೇಳಿದರು.

ಪಂದ್ಯ ಆರಂಭ: ರಾತ್ರಿ 8.00

ಸ್ಥಳ: ಕಂಠೀರವ ಕ್ರೀಡಾಂಗಣ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry