ಡಾ. ಖಾದರ್‌ಗೆ ‘ಗುರುಬಸವ ಪುರಸ್ಕಾರ’

7

ಡಾ. ಖಾದರ್‌ಗೆ ‘ಗುರುಬಸವ ಪುರಸ್ಕಾರ’

Published:
Updated:
ಡಾ. ಖಾದರ್‌ಗೆ ‘ಗುರುಬಸವ ಪುರಸ್ಕಾರ’

ಬೀದರ್: ಇಲ್ಲಿಯ ಬಸವ ಸೇವಾ ಪ್ರತಿಷ್ಠಾನವು ಈ ಸಾಲಿನ ‘ಗುರುಬಸವ ಪುರಸ್ಕಾರ’ಕ್ಕೆ ಮೈಸೂರಿನ ಹೋಮಿಯೋಪತಿ ವೈದ್ಯ ಖಾದರ್ ಅವರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿಯು ₹ 51 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳ ಗೊಂಡಿದೆ. ಜನವರಿ 29 ರಿಂದ 31 ರ ವರೆಗೆ ಬಸವಗಿರಿಯಲ್ಲಿ ನಡೆಯಲಿರುವ ‘ವಚನ ವಿಜಯೋತ್ಸವ’ದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ತಿಳಿಸಿದ್ದಾರೆ.

ಪ್ರತಿಷ್ಠಾನದಿಂದ ಕೊಡಲಾಗುವ ಇನ್ನೊಂದು ವಿಶೇಷ ಪ್ರಶಸ್ತಿ ‘ವೀರಮಾತೆ ಅಕ್ಕ ನಾಗಲಾಂಬಿಕಾ ಪುರಸ್ಕಾರ’ಕ್ಕೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಕಾಲು ಕಳೆದು ಕೊಂಡ ಹುಬ್ಬಳ್ಳಿಯ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹ 21 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry