‘ರೈತ, ಸೈನಿಕ ದೇಶದ ಕಣ್ಣು’

7

‘ರೈತ, ಸೈನಿಕ ದೇಶದ ಕಣ್ಣು’

Published:
Updated:
‘ರೈತ, ಸೈನಿಕ ದೇಶದ ಕಣ್ಣು’

ಕಲಬುರ್ಗಿ: ‘ರೈತ ಮತ್ತು ಸೈನಿಕರು ದೇಶದ ಎರಡು ಕಣ್ಣುಗಳಿದ್ದಂತೆ’ ಎಂದು ಹಾಗರಗುಂಡಗಿ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಈಚೆಗೆ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತ ಚೆನ್ನಾಗಿ ಬೆಳೆ ಬೆಳೆದರೆ ನಾವು, ನೀವೆಲ್ಲ ಆರೋಗ್ಯವಾಗಿರುತ್ತೇವೆ. ಗಡಿಯಲ್ಲಿ ಸೈನಿಕ ಇರುವುದರಿಂದ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ. ಅದಕ್ಕಾಗಿ ರೈತರನ್ನು ಮತ್ತು ಸೈನಿಕರನ್ನು ಗೌರವದಿಂದ ಕಾಣಬೇಕು’ ಎಂದರು.

ಯುವ ಕಾಂಗ್ರೆಸ್ ಮುಖಂಡ ಶಿವಅಷ್ಠಗಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಷಣ್ಮುಖಪ್ಪ ಶಿಖರಬಂಡಿ ಮಾತನಾಡಿದರು. ಬಸವರಾಜ ಹೇರೂರ, ತುಳಜಪ್ಪ ಬಿರಾದಾರ, ಬಾಬುರಾಯ ವೈಜಾಪುರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry