‘ಡಾಲರ್’ ಇಂದು ಪ್ರದರ್ಶನ

7

‘ಡಾಲರ್’ ಇಂದು ಪ್ರದರ್ಶನ

Published:
Updated:
‘ಡಾಲರ್’ ಇಂದು ಪ್ರದರ್ಶನ

ಕಿರುಚಿತ್ರ: ಡಾಲರ್!

ನಿರ್ದೇಶಕ: ಸುರೇಶ ಪಾವಗಡ

ನಿರ್ಮಾಪಕ: ಮಲ್ಲಿಕಾರ್ಜುನ

ಸಾಹಿತ್ಯ– ಗೊರವಿ ಆಲ್ದೂರು.

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳ ಹಾವಳಿ ಹೆಚ್ಚಾಗಿದೆ. ಇದರ ಮಧ್ಯೆ ವಿಭಿನ್ನವಾಗಿ ಸದ್ದು ಮಾಡುತ್ತಿರುವ ಕಿರುಚಿತ್ರ ‘ಡಾಲರ್’.

ತಾಯಿಯಿಲ್ಲದ ಮಗಳನ್ನು ಹೆಚ್ಚಾಗಿ ಪ್ರೀತಿಸುವ ತಂದೆ ಒಂದೆಡೆಯಾದರೆ, ತಂದೆಯ ಪ್ರೀತಿಯನ್ನು ಲೆಕ್ಕಿಸದೆ ಸದಾ ಪ್ರಿಯತಮನೊಂದಿಗೆ ಒಡಾಡಿಕೊಂಡಿರುವ ಅವನಿಗಾಗಿ ಅಪ್ಪನನ್ನೆ ಧಿಕ್ಕರಿಸುವ ಮಗಳು ಇನ್ನೊಂದೆಡೆ. ಇದ್ದಾಗ ಅಪ್ಪನ ಪ್ರೀತಿ, ಬೆಲೆ ಅರಿವಾಗದೆ ಕಳೆದುಕೊಂಡಾಗ ಅದಕ್ಕಾಗಿ ಹಂಬಲಿಸುವ ಪರಿ ಮತ್ತು ಬದಲಾವಣೆಯ ಸಕಾರಾತ್ಮಕ ದೃಷ್ಟಿಕೋನದ ಚಿತ್ರಣವೂ ಇಲ್ಲಿ ಅನಾವರಣವಾಗಿದೆ.

ಪಾವಗಡದ ಯುವ ನಿರ್ದೇಶಕ ಸುರೇಶ ಪಾವಗಡ ಅವರ ಪ್ರಥಮ ಪ್ರಯತ್ನದಲ್ಲಿ ನಿರ್ದೇಶನಗೊಂಡಿರುವ ಈ ಚಿತ್ರಕ್ಕೆ ಸಾಕಷ್ಟು ವಾಹಿನಿಗಳಲ್ಲಿ ನಿರೂಪಕನಾಗಿ ಕೆಲಸ ಮಾಡಿರುವ ಬೆಂಗಳೂರು ಮೂಲದ ಸುರಸುಂದರ ಅವಿನಾಶ್ ನಾಯಕನಾಗಿ ಹಾಗೂ ನಾಯಕಿಯಾಗಿ ಕಾವ್ಯ ಗೌಡ್ತಿ ಬಣ್ಣ ಹಚ್ಚಿದ್ದಾರೆ.

‘ಡಾಲರ್‌’ (ಜ.27) ಇಂದು ನಗರದ ಕೆ‌.ಹೆಚ್ ಕಲಾಸೌಧದಲ್ಲಿ ಅದ್ದೂರಿ ಪ್ರದರ್ಶನಗೊಳ್ಳಲಿದೆ.

ಮಲ್ಲಿಕಾರ್ಜುನ ನಿರ್ಮಾಪಕರಾಗಿದ್ದು, ವಿಕಾಸ್ ವಸಿಷ್ಠ ಅವರ ಸಂಗೀತ ಮತ್ತು ಗೊರವಿ ಆಲ್ದೂರು‌ ಅವರ ಸಾಹಿತ್ಯಕ್ಕೆ ಸ್ಪರ್ಷ ಆರ್‌.ಕೆ ಧ್ವನಿಯಾಗಿದ್ದಾರೆ. ರಾಜ್‌ಕಾಂತ ಛಾಯಾಗ್ರಹಣಕ್ಕೆ ಕತ್ತರಿ ಪ್ರಯೋಗ ಮಾಡಿರೋದು ರಾಮಿ ಶೆಟ್ಟಿ ಪವನ್ ಹಾಗು ಆಯುರ್ ಸ್ವಾಮಿ.  ಬಹುತೇಕ ಚಿತ್ರೀಕರಣ ಪಾವಗಡದಲ್ಲೆ ಮುಗಿಸಿರುವ ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹಿನ್ನೆಲೆ ಧ್ವನಿ ನೀಡಿರುವುದು ಚಿತ್ರದ ಇನ್ನೊಂದು ವಿಶೇಷ.

ಒಂದು ವಾರದ ಹಿಂದಷ್ಟೆ ಬಿಡುಗಡೆಯಾಗಿದ್ದ ಡಾಲರ್ ಚಿತ್ರದ ಪೋಸ್ಟರ್ ಸಾಮಾಜಿಕ್ ಜಾಲತಾಣದಲ್ಲಿ ವೈರಲ್ ಆಗಿದ್ದು ಹಳೆ ವಿಷಯ. ಈಗ ನೆನ್ನೆಯಷ್ಟೆ ಬಿಡುಗಡೆಯಾಗಿರುವ ವಿಶೇಷವಾದ ಹಾಡಿಗೆ ಚಿತ್ರರಂಗದ ನಟರು ಹಾಗು ಹಿರಿಯ ಕಲಾವಿದರು ಮೆಚ್ಚುಗೆಯ ಮಾತುಗಳನ್ನಾಡಿಗೆದ್ದಾರೆ.

‘‘ಪ್ರೀತಿ ಮಮತೆಯ ರೂಪ ಜೀವ ಮಿಡಿಯುವ ದೀಪ, ಮಳೆಹನಿಯಂತವ ನೀನು

ಬೆಳದಿಂಗಳೆ ನೀನು ನನಗಾಗಿ ಬದುಕಿದ ಒಂದೇ ಜೀವ ನನ್ನ ದೈವ ’’...

ಈ ಹಾಡನ್ನು ಕೇಳಿದವರು ಹಾಗೇ ಗುನುಗುತ್ತಲೆ ಇರುವುದಂತು ಖಂಡಿತ.

ನೀವು ಒಮ್ಮೆ ಕೇಳಿ. https:/youtu.be/RW3j2OZjCmk

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry