ಅಮಿತ್ ಶಾ ಅವರನ್ನು ಜೈಲು ಹಕ್ಕಿ ಎಂದ ಸಿದ್ದರಾಮಯ್ಯ; ಟ್ವಿಟರ್‍ನಲ್ಲಿ ಜಟಾಪಟಿ

7

ಅಮಿತ್ ಶಾ ಅವರನ್ನು ಜೈಲು ಹಕ್ಕಿ ಎಂದ ಸಿದ್ದರಾಮಯ್ಯ; ಟ್ವಿಟರ್‍ನಲ್ಲಿ ಜಟಾಪಟಿ

Published:
Updated:
ಅಮಿತ್ ಶಾ ಅವರನ್ನು ಜೈಲು ಹಕ್ಕಿ ಎಂದ ಸಿದ್ದರಾಮಯ್ಯ; ಟ್ವಿಟರ್‍ನಲ್ಲಿ ಜಟಾಪಟಿ

ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಓರ್ವ ಮಾಜಿ ಜೈಲು ಹಕ್ಕಿಯನ್ನು ಆಯ್ಕೆ ಮಾಡಿರುವ ಮಾಜಿ ಜೈಲು ಹಕ್ಕಿಯೊಬ್ಬರು ಈ  ರೀತಿ ಹೇಳುತ್ತಿದ್ದಾರೆ. ನನ್ನ ಮತ್ತು ನನ್ನ ಸರ್ಕಾರದ ವಿರುದ್ಧವಿರುವ ಭ್ರಷ್ಟಾಚಾರದ ಲೆಕ್ಕವನ್ನು ಕೊಡಲು ಇವರಿಂದ ಸಾಧ್ಯವೆ?. ಸುಳ್ಳುಗಳನ್ನು ಹೇಳುವುದರಿಂದ ಯಾವುದೇ ಪ್ರಯೋಜನವಾಗಲ್ಲ, ಜನರು ಇದನ್ನೆಲ್ಲಾ ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಟ್ವೀಟ್ ಮಾಡಿದ್ದರು.

[related]

ಇದಕ್ಕೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಕಾಂಗ್ರೆಸ್ (ಐ) ರೂಪಿಸಿದ್ದೇ  ಮಾಜಿ ಜೈಲು ಹಕ್ಕಿ, ಅವರು ದೇಶದ ಮಾಜಿ ಪ್ರಧಾನಿಯಾಗಿದ್ದರು. ಅವರ ಮಗ ಮಾಜಿ ಪ್ರಧಾನಿ ಬೋಫೋರ್ಸ್ ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿ ಶಾಶ್ವತವಾಗಿ ಜೈಲು ಹಕ್ಕಿಯಾಗಿರಬೇಕಾಗಿತ್ತು. ಆದರೆ ದುರದೃಷ್ಟವಶಾತ್ ನಿಮ್ಮ ಪಕ್ಷ ಪ್ರಾಯೋಜಿತ ಉಗ್ರವಾದವೇ ಅವರನ್ನು ಹತ್ಯೆ ಮಾಡಿತು. ಇದಕ್ಕಿಂತ ಇನ್ನೇನಾದರೂ ಪಟ್ಟಿ ಬೇಕಾ? ಎಂದು ಕೇಳಿದ್ದರು.

ಹೀಗೆ ಸಿಎಂ ಮತ್ತು ಡಿವಿಎಸ್ ನಡುವೆ ಟ್ವೀಟ್ ವಾರ್ ನಡೆದಿತ್ತು. ಈ ಜಟಾಪಟಿಯಲ್ಲಿ ಸಿದ್ದರಾಮಯ್ಯ ಅಮಿತ್ ಶಾ ಅವರನ್ನು  ಜೈಲು ಹಕ್ಕಿ ಎಂದಿದ್ದು, ಇದೀಗ ಟ್ವಿಟರ್‍‍ನಲ್ಲಿ #JailBirdShah ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry