ಶೂಟಿಂಗ್‌: ಮೂರನೇ ಸ್ಥಾನಕ್ಕೆ ಕುಸಿದ ಸೂರ್ಯ

7

ಶೂಟಿಂಗ್‌: ಮೂರನೇ ಸ್ಥಾನಕ್ಕೆ ಕುಸಿದ ಸೂರ್ಯ

Published:
Updated:
ಶೂಟಿಂಗ್‌: ಮೂರನೇ ಸ್ಥಾನಕ್ಕೆ ಕುಸಿದ ಸೂರ್ಯ

ಹುಬ್ಬಳ್ಳಿ: ಬೆಂಗಳೂರಿನ ಯುವ ಶೂಟರ್‌ ಕೆ.ಪಿ. ಸುಹಾಸ ಅವರು ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಕ್ಲಬ್‌ ನಗರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮುಕ್ತ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಶುಕ್ರವಾರದ ಅಂತ್ಯಕ್ಕೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗುರುವಾರ ಮುನ್ನಡೆ ಹೊಂದಿದ್ದ ಆರ್‌.ಡಿ. ಸೂರ್ಯ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

10 ಮೀಟರ್‌ ಏರ್‌ ರೈಫಲ್‌ ಪೀಪ್‌ ಸೈಟ್‌ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಸುಹಾಸ 618.5 ಪಾಯಿಂಟ್ಸ್‌ ಪಡೆದು ಮುನ್ನಡೆ ಸಾಧಿಸಿದರು. ಮಹಾರಾಷ್ಟ್ರದ ಅನಿಲ್‌ ಪಾಂಡೆ 618.4 ಪಾಯಿಂಟ್ಸ್‌ ಗಳಿಸಿದ್ದು, ಮೊದಲ ಸ್ಥಾನಕ್ಕಾಗಿ ಕುತೂಹಲದ ಪೈಪೋಟಿ ಏರ್ಪಟ್ಟಿದೆ. ಸೂರ್ಯ ಅವರ ಖಾತೆಯಲ್ಲಿ 618 ಪಾಯಿಂಟ್ಸ್‌ ಇವೆ. ಈ ವಿಭಾಗದಲ್ಲಿ ಒಟ್ಟು 15 ಸುತ್ತುಗಳು ಇದ್ದು, 12 ಸುತ್ತುಗಳು ಪೂರ್ಣಗೊಂಡಿವೆ.

ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಎನ್‌. ಹರ್ಷಿತಾ 405.7 ‍ಪಾಯಿಂಟ್ಸ್‌ನಿಂದ ಅಗ್ರಸ್ಥಾನದಲ್ಲಿದ್ದಾರೆ. ಗುರುವಾರದ ಅಂತ್ಯಕ್ಕೆ ಅಗ್ರಸ್ಥಾನ ಕಾಯ್ದುಕೊಂಡಿದ್ದ ಜೀವಿತಾ ಸಚ್ಚಿದಾನಂದ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರ ಖಾತೆಯಲ್ಲಿ 405 ಪಾಯಿಂಟ್ಸ್‌ ಇವೆ.

ಮಹಾರಾಷ್ಟ್ರದ ಆಯುಷ್‌ ರಾಹುಲ್‌ (403.9) ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಇವರು ಮೊದಲು ಎರಡನೇ ಸ್ಥಾನದಲ್ಲಿದ್ದರು. ಈ ವಿಭಾಗದ ಫೈನಲ್‌ ಪಂದ್ಯಗಳು ಶನಿವಾರ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry