ಕಂಪನಿಗಳ ವಿಲೀನ ಸ್ವಾಧೀನ ಮೊತ್ತ ಅಲ್ಪ ಇಳಿಕೆ

7

ಕಂಪನಿಗಳ ವಿಲೀನ ಸ್ವಾಧೀನ ಮೊತ್ತ ಅಲ್ಪ ಇಳಿಕೆ

Published:
Updated:

ಮುಂಬೈ: 2017ರಲ್ಲಿ ಕಂಪನಿಗಳ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗಳ ಒಟ್ಟಾರೆ ಮೊತ್ತವು ₹ 3.44 ಲಕ್ಷ ಕೋಟಿ ಇದೆ.

2016ರಲ್ಲಿ ಈ ಪ್ರಕ್ರಿಯೆಗಳ ಒಟ್ಟಾರೆ ಮೊತ್ತವು ₹ 3.76 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ 2017ರಲ್ಲಿ ಅಲ್ಪ‍ ಇಳಿಕೆ ಕಂಡಿದೆ.

2017ರಲ್ಲಿ ದೂರಸಂಪರ್ಕ, ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳ ವಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗಳು ನಡೆದಿವೆ ಎಂದು ಮರ್ಜರ್‌ ಮಾರ್ಕೆಟ್ ಸಂಸ್ಥೆ ವರದಿ ನೀಡಿದೆ.

ಖಾಸಗಿ ವಲಯದಲ್ಲಿ ಭಾರತದ ಎರಡನೇ ಅತಿದೊಡ್ಡ ತೈಲ ಕಂಪನಿ ಎಸ್ಸಾರ್‌ ಆಯಿಲ್‌ ಅನ್ನು ರಷ್ಯಾದ ರೋಸ್‌ನೆಫ್ಟ್‌ ಮತ್ತು ಅದರ ಪಾಲುದಾರ ಕಂಪನಿಗಳು ಕಳೆದ ಆಗಸ್ಟ್‌ನಲ್ಲಿ ಖರೀದಿ ಮಾಡಿವೆ. ಸಾಲವನ್ನೂ ಒಳಗೊಂಡು ಒಟ್ಟು ₹87,100 ಕೋಟಿ ಮೊತ್ತದ ಸ್ವಾಧೀನ ಒಪ್ಪಂದ ನಡೆದಿದೆ. ಇದನ್ನು ವರದಿಯಲ್ಲಿ ಸೇರಿಸಿಲ್ಲ. ಈ ಮೊತ್ತವನ್ನೂ ಒಳಗೊಂಡಿದ್ದರೆ ದಾಖಲೆ ಮಟ್ಟವಾದ ₹ 4.26 ಲಕ್ಷ ಕೋಟಿಗೆ ಏರಿಕೆ ಕಾಣುತ್ತಿತ್ತು.

ಇಂಧನ, ಗಣಿಗಾರಿಕೆ: ಇಂಧನ, ಗಣಿಗಾರಿಕೆ ಮತ್ತು ಸೇವಾ ವಲಯದಲ್ಲಿ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆ ಶೇ 69.4 ರಷ್ಟು ಇಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry