ಉಪ ಆಯುಕ್ತರನ್ನು ತರಾಟೆ ತೆಗದುಕೊಂಡ ಸಂಸದ ಪ್ರತಾಪ್ ಸಿಂಹ

7

ಉಪ ಆಯುಕ್ತರನ್ನು ತರಾಟೆ ತೆಗದುಕೊಂಡ ಸಂಸದ ಪ್ರತಾಪ್ ಸಿಂಹ

Published:
Updated:
ಉಪ ಆಯುಕ್ತರನ್ನು ತರಾಟೆ ತೆಗದುಕೊಂಡ ಸಂಸದ ಪ್ರತಾಪ್ ಸಿಂಹ

ಮೈಸೂರು: ಹುಣಸೂರು ನಗರದಲ್ಲಿ ಶನಿವಾರ ಆಯೋಜಿಸಿರುವ ಹನುಮ ಜಯಂತಿಯ ವೇಳೆ ಮಾಧ್ಯಮಗಳನ್ನು ನಿಯಂತ್ರಿಸಲು ಬಂದ ಉಪ ಆಯುಕ್ತರನ್ನು ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವೇನೂ ಭಿಕ್ಷೆ ನೀಡಿ ನಮಗೆ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ನೀವು ಸೂಚಿಸಿದ ಮಾರ್ಗದಲ್ಲಿ ನಾವು ತೆರಳುತ್ತಿದ್ದೇವೆ. ನಮ್ಮ ಮೇಲೆ ಒತ್ತಡ ಹಾಕಿದ್ರೆ ನಾನು ಇಲ್ಲೆ ರಸ್ತೆಯಲ್ಲೇ ಕೂರುತ್ತೇನೆ ಎಂದು ಪ್ರತಾಪ್ ಸಿಂಹ ಉಪ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾದ್ರೆ ಕೋಪ ಬರುತ್ತೆ. ಕೋಪ ಬಂದಾಗ ಗಲಾಟೆ ಆಗುತ್ತೆ. ಇವೆಲ್ಲದಕ್ಕೂ ಅವಕಾಶ ಮಾಡಿಕೊಡಬೇಡಿ. ಸುಮ್ಮನೆ ಮೆರವಣಿಗೆಯಲ್ಲಿ ಹೊರಡಲು ಬಿಡಿ.  ಇದೇನು ಮ್ಯಾರಥಾನಾ ಓಡಿಕೊಂಡು ಮೆರವಣಿಗೆಯಲ್ಲಿ ಹೋಗೋಕಾಗುತ್ತಾ? ಎಂದು ಸಂಸದ ಗುಡುಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry