ಕಾಬೂಲ್‌ ದಾಳಿ: 100ಕ್ಕೂ ಅಧಿಕ ಸಾವು

5

ಕಾಬೂಲ್‌ ದಾಳಿ: 100ಕ್ಕೂ ಅಧಿಕ ಸಾವು

Published:
Updated:
ಕಾಬೂಲ್‌ ದಾಳಿ: 100ಕ್ಕೂ ಅಧಿಕ ಸಾವು

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ ಉಗ್ರರು ಸ್ಫೋಟಕ ತುಂಬಿದ್ದ ಆಂಬುಲೆನ್ಸ್ ಸ್ಫೋಟಿಸಿದ್ದು, ಘಟನೆಯಲ್ಲಿ 95ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿರುವುದಾಗಿ ಆಂತರಿಕ ಸಚಿವಾಲಯದ ಉಪ ವಕ್ತಾರ ನಸರತ್ ರಹಿಮ್ ಹೇಳಿದ್ದಾರೆ.

‘ಆತ್ಮಾಹುತಿ ಬಾಂಬ್ ದಾಳಿಕೋರರು ಚೆಕ್‌ಪೊಸ್ಟ್‌ಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಂಬುಲೆನ್ಸ್ ಬಳಸಿಕೊಂಡಿದ್ದಾರೆ. ಮೊದಲ ಚೆಕ್‌ಪೊಸ್ಟ್ ಬಳಿ ಅವರನ್ನು ತಡೆದಾಗ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದಾಗಿ ಹೇಳಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಎರಡನೇ ಚೆಕ್‌ಪೋಸ್ಟ್‌

ನಲ್ಲಿ ಸಿಕ್ಕಿ ಬಿದ್ದರು. ಸಿಕ್ಕಿಬಿದ್ದ ತಕ್ಷಣ ಅಲ್ಲಿಯೇ ಬಾಂಬ್‌ ಸ್ಫೋಟಿಸಿದ್ದಾರೆ’ ಎಂದು ಅವರು ಹೇಳಿದರು. ಘಟನೆಯನ್ನು ಭಾರತ ಖಂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry