ಫೆ.18ಕ್ಕೆ ಎಸ್‌ಬಿಐ ‘ಗ್ರೀನ್‌ ಮ್ಯಾರಥಾನ್

7

ಫೆ.18ಕ್ಕೆ ಎಸ್‌ಬಿಐ ‘ಗ್ರೀನ್‌ ಮ್ಯಾರಥಾನ್

Published:
Updated:
ಫೆ.18ಕ್ಕೆ ಎಸ್‌ಬಿಐ ‘ಗ್ರೀನ್‌ ಮ್ಯಾರಥಾನ್

ಬೆಂಗಳೂರು: ಎಸ್‌ಬಿಐ ‘ಗ್ರೀನ್‌ ಮ್ಯಾರಥಾನ್‌’ ಅನ್ನು ಫೆ. 18ಕ್ಕೆ ವೈಟ್‌ಫೀಲ್ಡ್‌ನ ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆ (ಕೆಟಿಪಿಒ) ಆವರಣದಲ್ಲಿ ಹಮ್ಮಿಕೊಂಡಿದೆ.

2ಕೆ, 5ಕೆ, 10ಕೆ, 21ಕೆ ಓಟವನ್ನು ಆಯೋಜಿಸಿದೆ. ಒಟ್ಟು ಆರು ನಗರಗಳಲ್ಲಿ ಫೆ.4ರಿಂದ 21ರವರೆಗೆ ಮ್ಯಾರಥಾನ್‌ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮ ಸುಸ್ಥಿರತೆ ವಿಷಯದ ಮೇಲೆ ಕೇಂದ್ರಿಕೃತವಾಗಿದೆ.

ಓಟದಲ್ಲಿ ಭಾಗವಹಿಸಿದ ಎಲ್ಲರಿಗೂ ಸಸಿಯನ್ನು ಕೊಡುಗೆಯಾಗಿ ನೀಡಲಾಗುತ್ತದೆ. ಮೊದಲು ನೋಂದಣಿ ಮಾಡಿಕೊಂಡ 750 ಜನರಿಗೆ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ತಯಾರಿಸಿದ ಟಿ–ಶರ್ಟ್‌ಗಳನ್ನು ನೀಡಲಾಗುತ್ತದೆ ಎಂದು ಬ್ಯಾಂಕ್‌ನ ಡಿಎಂಡಿ ಪ್ರಶಾಂತ್‌ ಕುಮಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry