ಐಪಿಎಲ್‌ ಹರಾಜು 2018: ಕರ್ನಾಟಕದ ಕೆ.ಗೌತಮ್‌ಗೆ ₹6.2 ಕೋಟಿ,16 ವರ್ಷದ ಅಫ್ಘಾನ್‌ ಆಟಗಾರನಿಗೆ ₹4 ಕೋಟಿ

7

ಐಪಿಎಲ್‌ ಹರಾಜು 2018: ಕರ್ನಾಟಕದ ಕೆ.ಗೌತಮ್‌ಗೆ ₹6.2 ಕೋಟಿ,16 ವರ್ಷದ ಅಫ್ಘಾನ್‌ ಆಟಗಾರನಿಗೆ ₹4 ಕೋಟಿ

Published:
Updated:
ಐಪಿಎಲ್‌ ಹರಾಜು 2018: ಕರ್ನಾಟಕದ ಕೆ.ಗೌತಮ್‌ಗೆ ₹6.2 ಕೋಟಿ,16 ವರ್ಷದ ಅಫ್ಘಾನ್‌ ಆಟಗಾರನಿಗೆ ₹4 ಕೋಟಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) 11ನೇ ಆವೃತ್ತಿಯ  ಹರಾಜು ಪ್ರಕ್ರಿಯೆಯಲ್ಲಿ ಭಾನುವಾರ  ₹11.5 ಕೋಟಿ ಮೊತ್ತದೊಂದಿಗೆ ಜಯದೇವ್‌ ಉನಡ್ಕಟ್‌ ಅತಿ ದುಬಾರಿ ಭಾರತೀಯ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ.

ಶನಿವಾರ ₹ 12.5 ಕೋಟಿ ಮೊತ್ತಕ್ಕೆ ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್ ಅವರನ್ನು ಖರೀದಿಸಿದ್ದ ರಾಜಸ್ಥಾನ್ ರಾಯಲ್ಸ್ ಜಯದೇವ್‌ ಉನಡ್ಕಟ್‌ಗೂ ದುಬಾರಿ ಬೆಲೆ ನೀಡಿ ತನ್ನ ‍ಪಾಲಾಗಿಸಿಕೊಂಡಿತು.

ಕರ್ನಾಟಕದ ಆಫ್ ಸ್ಪಿನ್ನರ್ ಕೆ.ಗೌತಮ್‌ ₹6.20 ಕೋಟಿ ಮೊತ್ತಕ್ಕೆ ರಾಜಸ್ತಾನ್‌ ರಾಯಲ್ಸ್‌ ತಂಡ ಸೇರಿದರು. ಇವರಿಗೆ ₹20 ಲಕ್ಷ ಮೂಲಬೆಲೆ ನಿಗದಿಯಾಗಿತ್ತು.

ಅಫ್ಘಾನಿಸ್ತಾನದ 16 ವರ್ಷ ವಯಸ್ಸಿನ ಮುಜೀಬ್‌ ಜಾರ್ಡನ್‌ರನ್ನು ₹4 ಕೋಟಿ ನೀಡಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಖರೀದಿಸಿತು. ಇವರಿಗೆ ₹50 ಲಕ್ಷ ಮೂಲಬೆಲೆ ನಿಗದಿಯಾಗಿತ್ತು. ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್‌ ಹರಾಜಾಗದೆ ಉಳಿದಿದ್ದಾರೆ.

ಫ್ರಾಂಚೈಸ್‌ಗಳು ಶನಿವಾರ ಒಟ್ಟು 78 ಆಟಗಾರರನ್ನು ಖರೀದಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry