‘ಸೆಕೆಂಡ್‌ ಹ್ಯಾಂಡ್‌’ ಆಟಿಕೆಗಳ ಬಳಕೆ ಬೇಡ’

7

‘ಸೆಕೆಂಡ್‌ ಹ್ಯಾಂಡ್‌’ ಆಟಿಕೆಗಳ ಬಳಕೆ ಬೇಡ’

Published:
Updated:

ಲಂಡನ್‌ : ಮರು ಬಳಕೆ ಮಾಡುವ (ಸೆಕೆಂಡ್‌ ಹ್ಯಾಂಡ್‌) ಆಟಿಕೆಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಕಾರು, ರೈಲು, ಕಟ್ಟಡ ಸಾಮಗ್ರಿ, ಪಜಲ್‌ ಸೇರಿದಂತೆ ಅನೇಕ ರೀತಿಯ ಆಟಿಕೆಗಳನ್ನು ಇಲ್ಲಿಯ ಪ್ಲೈಮೌತ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿರುವ ಅಧ್ಯಯನಕ್ಕೆ ಒಳಪಡಿಸಿದ್ದರು. ಇದರಲ್ಲಿ ಸೀಸ, ಕ್ರೋಮಿಯಂ, ಸೆಲಿನಿಯಂ ಸೇರಿದಂತೆ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ವಿಷಕಾರಿ ಅಂಶಗಳು ಇರುವುದು ಪತ್ತೆಯಾಗಿದೆ.

ಸ್ನೇಹಿತರು ನೀಡುವ ಅಥವಾ ಪೂರ್ವಜರು ಬಳಸುತ್ತಿದ್ದ ಆಟಿಕೆಗಳನ್ನು ಮಕ್ಕಳಿಗೆ ನೀಡುವುದು ಎಂದರೆ ಹಲವು ಪೋಷಕರಿಗೆ ತುಂಬಾ ಸಂತೋಷದ ವಿಷಯ. ಇನ್ನು ಕೆಲವೊಮ್ಮೆ ಮಳಿಗೆಗಳಲ್ಲಿ ಕಡಿಮೆ ದರದಲ್ಲಿ ಇದು ಸಿಗುತ್ತದೆ. ಆದರೆ ಅದನ್ನು ನೀಡುವ ಮುನ್ನ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತಿಮುಖ್ಯವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry