ಭಾರತ ರತ್ನ ಅಮರ್ತ್ಯ ಸೇನ್‌ರನ್ನು ದೇಶದ್ರೋಹಿ ಎಂದ ಸುಬ್ರಮಣಿಯನ್ ಸ್ವಾಮಿ

7

ಭಾರತ ರತ್ನ ಅಮರ್ತ್ಯ ಸೇನ್‌ರನ್ನು ದೇಶದ್ರೋಹಿ ಎಂದ ಸುಬ್ರಮಣಿಯನ್ ಸ್ವಾಮಿ

Published:
Updated:
ಭಾರತ ರತ್ನ ಅಮರ್ತ್ಯ ಸೇನ್‌ರನ್ನು ದೇಶದ್ರೋಹಿ ಎಂದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಖ್ಯಾತ ಅರ್ಥಶಾಸ್ತ್ರಜ್ಞ, ಭಾರತ ರತ್ನ ಪುರಸ್ಕೃತ ಅಮರ್ತ್ಯ ಸೇನ್ ಅವರನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೇಶದ್ರೋಹಿ ಎಂದು ಟೀಕಿಸಿದ್ದಾರೆ.

‘ಅವರು ಕೂಡ (ಆರ್‌ಎಸ್ಎಸ್‌ನವರು) ದೇಶದ ನಾಗರಿಕರು. ಅವರು ಕಠಿಣ ಶ್ರಮ ಪಟ್ಟಿದ್ದಾರಾದರೂ ಅದನ್ನು ಪೂರ್ತಿಯಾಗಿ ಗುರುತಿಸಲಾಗಿಲ್ಲ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಸಮಾಜ ಸೇವೆ ಮಾಡಿದವರು ಆರ್‌ಎಸ್‌ಎಸ್‌ನವರು ಎಂಬುದು ನನ್ನ ಭಾವನೆ. ಎನ್‌ಡಿಎ ದೇಶದ್ರೋಹಿ ಅಮರ್ತ್ಯ ಸೇನ್‌ ಅವರಿಗೆ ಅದನ್ನು (ಭಾರತ ರತ್ನ) ನೀಡಿತು. ಅವರು ನಲಂದಾ ವಿಶ್ವವಿದ್ಯಾಲಯವನ್ನು ಕೊಳ್ಳೆ ಹೊಡೆದಿದ್ದು ಬಿಟ್ಟರೆ ದೇಶಕ್ಕಾಗಿ ಏನು ಮಾಡಿದ್ದಾರೆ’ ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ ಎಂಬುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಎಡಪಂಥೀಯರಾಗಿರುವುದಕ್ಕೆ ಮತ್ತು ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಒತ್ತಾಯದ ಮೇರೆಗೆ ಅಮರ್ತ್ಯ ಸೇನ್‌ ಅದನ್ನು (ಪುರಸ್ಕಾರ) ಪಡೆದರು’ ಎಂದು ಸ್ವಾಮಿ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಕೆಲವು ನಾಯಕರನ್ನು ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದನ್ನು ಕಾಂಗ್ರೆಸ್‌ ಟೀಕಿಸಿದ ಬೆನ್ನಲ್ಲೇ ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.

ಬಿಜೆಪಿಗಾಗಿ ಕೆಲಸ ಮಾಡುತ್ತಿರುವವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸರ್ಜೆವಾಲ ಭಾನುವಾರ ಟೀಕಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅವರು ಐವರ ಹೆಸರನ್ನು ಉಲ್ಲೇಖಿಸಿದ್ದರು. ಅದರಲ್ಲಿ ಆರ್‌ಎಸ್‌ಎಸ್ ನಾಯಕ ವೇದ ಪ್ರಕಾಶ್ ನಂದಾ ಮತ್ತು ಆರ್‌ಎಸ್‌ಎಸ್‌ನ ಕೇರಳ ಘಟಕದ ಪ್ರಚಾರಕ ಮುಖ್ಯಸ್ಥ ಪಿ. ಪರಮೇಶ್ವರ್ ಅವರ ಹೆಸರೂ ಇದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry