ಸಲ್ಮಾನ್‌, ಶಾರುಕ್‌ ಮಧ್ಯೆ ನಡೆಯುತ್ತಾ ಜಗಳ?

7

ಸಲ್ಮಾನ್‌, ಶಾರುಕ್‌ ಮಧ್ಯೆ ನಡೆಯುತ್ತಾ ಜಗಳ?

Published:
Updated:
ಸಲ್ಮಾನ್‌, ಶಾರುಕ್‌ ಮಧ್ಯೆ ನಡೆಯುತ್ತಾ ಜಗಳ?

ಪ್ರಮುಖ ನಾಯಕ, ನಾಯಕಿಯರ ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಮುಖಾಮುಖಿಯಾಗುವುದು ಹೊಸದೇನಲ್ಲ. ಈ ವರ್ಷ ಕೆಲವು ಬಹುನಿರೀಕ್ಷಿತ ಸಿನಿಮಾಗಳು ಹಾಗೆ ಮುಖಾಮುಖಿಯಾಗುವ ಸಾಧ್ಯತೆಗಳು ಕಾಣುತ್ತಿವೆ.

ಸಲ್ಮಾನ್‌ ಖಾನ್‌, ಅಜಯ್‌ ದೇವಗನ್‌, ಶಾರುಕ್‌ ಖಾನ್‌, ರಣವೀರ್‌ ಸಿಂಗ್‌ ಅವರ ಚಿತ್ರಗಳು 2018ರ ಡಿಸೆಂಬರ್‌ನಲ್ಲಿ ತೆರೆ ಕಾಣಲಿವೆ. ಈ ಬೆಳವಣಿಗೆಯಿಂದಾಗಿ ಸ್ಟಾರ್‌ ನಟರ ನಡುವೆ ಭಿನ್ನಾಭಿಪ್ರಾಯ ಮೂಡೀತೇ ಎಂದೂ ಬಿ ಟೌನ್‌ ಮಾತನಾಡುತ್ತಿದೆ.

ಚಿತ್ರೀಕರಣಕ್ಕೂ ಮೊದಲೇ ಸುದ್ದಿ ಮಾಡುತ್ತಿರುವ, ಸಲ್ಮಾನ್‌ ಖಾನ್‌ ಅಭಿನಯದ ‘ದಬಾಂಗ್‌ 3’ ಚಿತ್ರೀಕರಣ ಏಪ್ರಿಲ್‌ನಲ್ಲಿ ಆರಂಭವಾಗಲಿದ್ದು, ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ನಿರ್ಮಾಪಕ ಅರ್ಬಾಜ್‌ ಖಾನ್‌ ಅವರ ಲೆಕ್ಕಾಚಾರವಿದು. ಅಜಯ್‌ ದೇವಗನ್‌ ಅಭಿನಯದ ‘ಟೋಟಲ್‌ ಧಮಾಲ್‌’ ಡಿಸೆಂಬರ್‌ 7, ಶಾರುಕ್‌ ಅಭಿನಯದ ‘ಜೀರೊ’ 21 ಹಾಗೂ ರಣವೀರ್‌ ಸಿಂಗ್‌ನ ‘ಸಿಂಬ’ 28ರಂದು ಬಿಡುಗಡೆಯಾಗಲಿದೆ. ಈ ಮೂರೂ ದಿನಗಳು, ಚಿತ್ರ ಬಿಡುಗಡೆಗೆ ಡಿಸೆಂಬರ್‌ ತಿಂಗಳಲ್ಲಿ ಮಹತ್ವದ ದಿನಗಳಾಗಿವೆ.

ಮೂರೂ ಚಿತ್ರಗಳ ಬಿಡುಗಡೆ ದಿನಾಂಕ ಪ್ರಕಟವಾಗಿದ್ದರೆ, ‘ದಬಾಂಗ್‌ 3’ ಬಿಡುಗಡೆ ದಿನಾಂಕ ಪ್ರಕಟವಾಗಬೇಕಾಗಿದೆ. ಒಂದು ವೇಳೆ ‘ಜೀರೋ’ ಬಿಡುಗಡೆಯಾಗುವ ದಿನವೇ ‘ದಬಾಂಗ್‌ 3 ’ ಬಿಡುಗಡೆಯಾದಲ್ಲಿ ಈ ವರ್ಷದ ದೊಡ್ಡ ವಿವಾದ ಇದೇ ಆಗಲಿದೆ ಎಂಬುದು ಬಾಲಿವುಡ್‌ ಗಲ್ಲಿ ಆತಂಕ ವ್ಯಕ್ತಪಡಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry