‘ಪ್ರೇಮಬರಹ’ದ ಸಸ್ಪೆನ್ಸ್‌

7

‘ಪ್ರೇಮಬರಹ’ದ ಸಸ್ಪೆನ್ಸ್‌

Published:
Updated:
‘ಪ್ರೇಮಬರಹ’ದ ಸಸ್ಪೆನ್ಸ್‌

‘ಬಿಗ್‌ಬಾಸ್‌’ ಖ್ಯಾತಿಯ ಚಂದನ್‌ ಹಾಗೂ ಬಟ್ಟಲು ಕಂಗಳ ಬೆಡಗಿ ಐಶ್ವರ್ಯಾ ಸರ್ಜಾ ಅಭಿನಯದ ‘ಪ್ರೇಮಬರಹ’ ಚಿತ್ರದ ಟ್ರೇಲರ್‌ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಿದೆ. ಮೂರು ದಿನದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಟ್ರೇಲರ್‌ ವೀಕ್ಷಿಸಿದ್ದಾರೆ.

ಈ ಚಿತ್ರದಲ್ಲಿ ಚಂದನ್‌, ಐಶ್ವರ್ಯಾ ಇಬ್ಬರದೂ ಪತ್ರಕರ್ತರ ಪಾತ್ರ. ಅರ್ಜುನ್ ಸರ್ಜಾ ಅವರ ಪ್ರವೇಶದೊಂದಿಗೆ ಟ್ರೇಲರ್‌ ಆರಂಭವಾಗುತ್ತದೆ. ಪ್ರೀತಿ, ಪ್ರೇಮ, ಪ್ರೇಮಿಗಳ ಕಿತ್ತಾಟ, ಹಾಸ್ಯ ಎಲ್ಲವೂ ಈ ಚಿತ್ರದಲ್ಲಿರುವಂತೆ ಕಾಣುತ್ತದೆ. ಕೊನೆಯ ದೃಶ್ಯ ರೋಮಾಂಚನಕಾರಿಯಾಗಿದೆ. ಬೆಂಕಿಯುಂಡೆಯ ಮಧ್ಯದಿಂದ ಪಾರಾಗಿ ಚಂದನ್‌ ಹಾಗೂ ಐಶ್ವರ್ಯಾ ಓಡಿಬರುವ ದೃಶ್ಯ ನೋಡಿದರೆ ಚಿತ್ರದ ಕತೆಯ ಬಗ್ಗೆ ಕುತೂಹಲ ಹುಟ್ಟುತ್ತದೆ.

‘ಪ್ರೇಮಬರಹ’ದ ಮೊದಲ ನೋಟದಲ್ಲೇ ಐಶ್ವರ್ಯಾ ಮನ ಸೆಳೆಯುತ್ತಾರೆ. ಅರ್ಜುನ್‌ ಜನ್ಯಾ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಚಿತ್ರದ ಹಾಡೊಂದರಲ್ಲಿ ದರ್ಶನ್‌‌‌ ಕೂಡಾ ಎಂಟ್ರಿ ಕೊಡುತ್ತಾರೆ. ಅವರದು ಅತಿಥಿ ಪಾತ್ರ. ಪ್ರಕಾಶ್‌ ರೈ, ಸುಹಾಸಿನಿ, ಮಂಡ್ಯ ರಮೇಶ್‌, ಸಾಧು ಕೋಕಿಲ, ರಂಗಾಯಣ ರಘು ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry