ವಿಶಿಷ್ಟ ಚಂದ್ರಗ್ರಹಣ ನೋಡಲು ಮರೆಯದಿರಿ!

7

ವಿಶಿಷ್ಟ ಚಂದ್ರಗ್ರಹಣ ನೋಡಲು ಮರೆಯದಿರಿ!

Published:
Updated:

ಬೆಂಗಳೂರು: ಇದೇ 31ರಂದು ವಿಶಿಷ್ಟ ಚಂದ್ರಗ್ರಹಣ ಘಟಿಸಲಿದೆ. 150 ವರ್ಷಗಳ ನಂತರ ಈ ರೀತಿ ಚಂದಮಾಮ ಕಾಣಿಸಿಕೊಳ್ಳುತ್ತಿದ್ದಾನೆ.

ಸೂರ್ಯ ಚಂದ್ರನ ನಡುವೆ ಭೂಮಿ ಒಂದೇ ಸರಳರೇಖೆಯಲ್ಲಿ ಬರುವ ಈ ದಿನದಲ್ಲಿ ಭೂಮಿಯ ಛಾಯೆ ಚಂದ್ರನ ಮೇಲೆ ಬೀಳುತ್ತದೆ. 5.18ಕ್ಕೆ ಚಂದ್ರನ ಮೇಲೆ ಭೂಮಿಯ ನೆರಳು (ಗ್ರಹಣ) ಬೀಳಲು ಪ್ರಾರಂಭವಾಗುತ್ತದೆ.

ಗ್ರಹಣಗಳು ನಿಯಮಿತವಾಗಿ ನಡೆಯುತ್ತಿರುತ್ತವೆ. ಆದರೆ, ಈ ಬಾರಿಯ ಚಂದ್ರಗ್ರಹಣ ಅನೇಕ ವಿಶಿಷ್ಟಗಳೊಂದಿಗೆ ಕೂಡಿದೆ. ಚಂದ್ರನು ಭೂಮಿಯ ಸುತ್ತ ದೀರ್ಘವೃತ್ತಾಕಾರವಾಗಿ ಸುತ್ತುತ್ತಾನೆ. ಒಂದು ಹಂತದಲ್ಲಿ ಭೂಮಿಗೆ ಬಹಳ ಸಮೀಪಿಸುತ್ತಾನೆ. ಇದಕ್ಕೆ ಸೂಪರ್‌ ಮೂನ್‌ ಎನ್ನುತ್ತೇವೆ. ಈ ಗ್ರಹಣದಲ್ಲಿ ಚಂದ್ರ, ಭೂಮಿಗೆ ಹತ್ತಿರವಾಗಿರುತ್ತಾನೆ. ತಿಂಗಳಲ್ಲಿ ಎರಡು ಹುಣ್ಣಿಮೆ ಅಪರೂಪ. ಅದೂ ಘಟಿಸುತ್ತಿರುವುದರಿಂದ ಗ್ರಹಣದ ಮೆರುಗು ಹೆಚ್ಚಲಿದೆ ಎಂದು ಭೌತವಿಜ್ಞಾನ ‍ಪ್ರಾಧ್ಯಾಪಕಿ ವೈ.ಸಿ. ಕಮಲಾ ವಿವರಿಸಿದರು.

ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶ: ಜವಹರ್‌ಲಾಲ್‌ ನೆಹರೂ ತಾರಾಲಯ ಸಂಜೆ 6.20ರಿಂದ ರಾತ್ರಿ 8.30ರವರೆಗೆ ಈ ಖಗೋಳ ವಿದ್ಯಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಿದೆ.

ಸಾಮೂಹಿಕ ವೀಕ್ಷಣೆ ಎಲ್ಲೆಲ್ಲಿ: ಶ್ರೀನಗರ (9886516636), ಬಸವೇಶ್ವರ ನಗರ (9986511717), ವಿಜಯನಗರ–ಚಂದ್ರಲೇಔಟ್ (8496010010), ರಾಜಾಜಿನಗರ (9972392736), ಕೆಂಗೇರಿ ಉಪನಗರ (9844437039), ಆರ್‌.ಟಿ.ನಗರ (9611603891), ಅರಬಿಂದೊ ಶಾಲೆ (9886310706), ಜೆ.ಪಿ. ಪಾರ್ಕ್‌ (9035608580)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry