ಈರುಳ್ಳಿ ಬೆಲೆ ಗಣನೀಯ ಇಳಿಕೆ

7

ಈರುಳ್ಳಿ ಬೆಲೆ ಗಣನೀಯ ಇಳಿಕೆ

Published:
Updated:
ಈರುಳ್ಳಿ ಬೆಲೆ ಗಣನೀಯ ಇಳಿಕೆ

ಬೆಂಗಳೂರು: ಕೆಲ ದಿನಗಳಿಂದ ₹40 ಹಾಗೂ ₹45ರ ಆಸುಪಾಸಿನಲ್ಲಿದ್ದ ಪ್ರತಿ ಕೆ.ಜಿ. ಈರುಳ್ಳಿ ಬೆಲೆ  ಗಣನೀಯವಾಗಿ ಇಳಿಕೆಯಾಗಿದೆ.

ಸಗಟು ವ್ಯಾಪಾರದಲ್ಲಿ ಈರುಳ್ಳಿ ಕೆ.ಜಿ.ಗೆ ₹25 ಹಾಗೂ ₹26, ಚಿಲ್ಲರೆ ವ್ಯಾಪಾರದಲ್ಲಿ ₹30 ಇದೆ. ಸಗಟು ವ್ಯಾಪಾರದಲ್ಲಿ 50 ಕೆ.ಜಿ ಈರುಳ್ಳಿಗೆ ₹1,200 ಇದೆ.

‘ಈರುಳ್ಳಿ ಕೊರತೆಯಿಂದ ದರದಲ್ಲಿ ಏರಿಳಿತವಾಗುತ್ತಿತ್ತು. ಮಹಾರಾಷ್ಟ್ರ ಹಾಗೂ ಚಿತ್ರದುರ್ಗದಿಂದ ಅತಿ ಹೆಚ್ಚಿನ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ರಾಜ್ಯದ ಬೇರೆ ಭಾಗಗಳಲ್ಲಿಯೂ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಬೆಲೆ ಇಳಿಕೆಗೆ ಇದೇ ಕಾರಣ’ ಎಂದು ಯಶವಂತಪುರದ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿ ಬಿ.ರವಿಶಂಕರ್ ಅವರು ತಿಳಿಸಿದರು.

‘ಮಹಾರಾಷ್ಟ್ರದಿಂದ ಪೂರೈಕೆಯಾಗುವ ಈರುಳ್ಳಿಗೆ ಕೆಲ ದಿನಗಳ ಮಟ್ಟಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry