7

ಬೀಗಮುದ್ರೆ ವಿವಾದ: ಆಪ್ ವಿರುದ್ಧ ಸಿಡಿದೆದ್ದ ಬಿಜೆಪಿ ಸದಸ್ಯರು

Published:
Updated:
ಬೀಗಮುದ್ರೆ ವಿವಾದ: ಆಪ್ ವಿರುದ್ಧ ಸಿಡಿದೆದ್ದ ಬಿಜೆಪಿ ಸದಸ್ಯರು

ನವದೆಹಲಿ: ದೆಹಲಿ ಮಾರುಕಟ್ಟೆಯಲ್ಲಿನ ಅಂಗಡಿಗಳಿಗೆ ಬೀಗಮುದ್ರೆ ಹಾಕಿರುವ ವಿವಾದ ಬಗ್ಗೆ ದೆಹಲಿಯ ಬಿಜೆಪಿ ನಾಯಕರು, ದೆಹಲಿಯ ಮೂರು ಮುನ್ಸಿಪಲ್ ಕಾರ್ಪೊರೇಶನ್‍ಗಳ ಕಮಿಷನರ್‍‍ಗಳು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಡುವೆ ನಡೆದ ಸಭೆ ಜಗಳದಲ್ಲಿ ಮುಕ್ತಾಯವಾಗಿದೆ.

ಆಮ್ ಆದ್ಮಿ ಪಕ್ಷದ ಸದಸ್ಯರು ಸತಾಯಿಸಿ, ಆಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ನಾಯಕರು ಮತ್ತು ಎಂಸಿಡಿ ಕಮಿಷನರ್‍‍ಗಳು ಸಭೆ ಆರಂಭವಾದ ಕೆಲವೇ ಕ್ಷಣದಲ್ಲಿ ಸಭೆ ಬಹಿಷ್ಕರಿಸಿ ಹೊರ ನಡೆದಿದ್ದಾರೆ. ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಧ್ಯಮದವರು ಅಲ್ಲಿ ಉಪಸ್ಥಿತರಿದ್ದ ಕಾರಣ ಇಲ್ಲಿ ವಾಗ್ವಾದ ಉಂಟಾಗಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದ್ದರೂ ಬಿಜೆಪಿ ಇದನ್ನು ನಿರಾಕರಿಸಿದೆ.

ಗೊಂದಲದಲ್ಲೇ ಸಭೆ ಮುಗಿದ ನಂತರ ಮಾತನಾಡಿದ ಕೇಜ್ರಿವಾಲ್, ಬೀಗ ಮುದ್ರೆ ಹಾಕುವ ನಿರ್ಧಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ದೆಹಲಿ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry