31–1–1968, ಬುಧವಾರ

7

31–1–1968, ಬುಧವಾರ

Published:
Updated:

ಮದರಾಸಿನ ದ್ವಿಭಾಷಾ ನೀತಿ, ದೇಶ ಒಡೆವ ರೀತಿ: ಕಾಂಗ್ರೆಸ್‌ ಅಧ್ಯಕ್ಷ ನಿಜಲಿಂಗಪ್ಪ ಅವರ ಪ್ರತಿಕ್ರಿಯೆ

ಬೆಂಗಳೂರು, ಜ. 30 – ಮದರಾಸ್‌ ಸರಕಾರದ ‘ದ್ವಿಭಾಷಾ ಸೂತ್ರ’ವನ್ನು ತಾವು ಒಪ್ಪುವುದಿಲ್ಲವೆಂದು ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯೂ ಆದ ಶ್ರೀ ಎಸ್‌. ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿ ಇದು ದೇಶವನ್ನು ಒಡೆಯುವ ರೀತಿ ಎಂದು ಟೀಕಿಸಿದರು.

ದೇಶ ಒಡೆಯುವ ಇದು ನಡೆಯಬಾರದು ಜನ ಇದಕ್ಕೆ ತುತ್ತಾಗಬಾರದು ಎಂದು ಎಚ್ಚರಿಸಿ ದೇಶದ ಏಕತೆಯೇ ಉನ್ನತ ಆದರ್ಶವಾಗಬೇಕು ಎಂದರು.

ಮುಖ್ಯಮಂತ್ರಿ ಮೇಲೆ ಅಧಿಕಾರ ದುರುಪಯೋಗ ಆರೋಪ

ಬೆಂಗಳೂರು, ಜ. 30– ಕಾಂಗ್ರೆಸ್‌ ಅಧ್ಯಕ್ಷರೂ ರಾಜ್ಯದ ಮುಖ್ಯಮಂತ್ರಿಗಳೂ ಒಬ್ಬರೇ ಆಗಿ ಶ್ರೀ ಎಸ್‌. ನಿಜಲಿಂಗಪ್ಪನವರು ಸಾರ್ವಜನಿಕ ನಿಧಿಯನ್ನು ಪಕ್ಷದ ಹಿತಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ವಿರೋಧಪಕ್ಷದ ನಾಯಕ ಶ್ರೀ ಎಸ್‌. ಶಿವಪ್ಪನವರು ಇಂದು ಇಲ್ಲಿ ಆಪಾದಿಸಿದರು.

ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿಯಾಗಿ ಎಂ.ವಿ. ರಾಮರಾವ್‌

ನವದೆಹಲಿ, ಜ. 30– ಮೈಸೂರು ಗೃಹಮಂತ್ರಿ ಶ್ರೀ ಎಂ.ವಿ. ರಾಮರಾವ್‌ ಅವರನ್ನು ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿಯನ್ನಾಗಿ ನೇಮಿಸಿರುವುದಾಗಿ ಅಧ್ಯಕ್ಷ ಶ್ರೀ ಎಸ್‌. ನಿಜಲಿಂಗಪ್ಪನವರು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಿದರು.

ಸೂಯೆಜ್‌ ಬಳಿ ಈಜಿಪ್ಟ್‌–ಇಸ್ರೇಲ್‌ ಉಗ್ರ ಕಾಳಗ

ಟೆಲ್‌ ಆವೀವ್‌, ಜ. 30– ಸೂಯೆಜ್‌ ಕಾಲುವೆಯ 45 ಮೈಲಿಯುದ್ದಕ್ಕೂ ಇಸ್ರೇಲ್‌ ಮತ್ತು ಈಜಿಪ್ಟ್‌ ಪಡೆಗಳ ನಡುವೆ ಉಗ್ರ ಕಾಳಗ ನಡೆಯಿತು.

ಬೆಂಗಳೂರು ವಾರ್ಸಿಟಿ ಕಾಲೇಜು ಅನಿರ್ದಿಷ್ಟ ಕಾಲ ಬಂದ್‌

ಬೆಂಗಳೂರು, ಜ. 30– ಬೆಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಕಾಲೇಜುಗಳನ್ನೂ ನಾಳೆಯಿಂದ ಅನಿರ್ದಿಷ್ಟ ಕಾಲದವರೆಗೆ ಮುಚ್ಚಲಾಗುವುದೆಂದು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್‌ ಶ್ರೀ ಪಿ. ಮಲ್ಲಿಕಾರ್ಜುನಪ್ಪನವರು ಇಂದು ರಾತ್ರಿ ತಿಳಿಸಿದರು.

ಕೇಂದ್ರದ ಕ್ರಮ ಕಾದು ನೋಡಿ; ಮುಖ್ಯಮಂತ್ರಿ ಸಲಹೆ

ಬೆಂಗಳೂರು, ಜ. 30– ‘ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯ ತೀರ್ಮಾನವನ್ನು ಕೇಂದ್ರ ಸರಕಾರ ಹೇಗೆ ಕಾರ್ಯಗತ ಮಡುವುದೆಂಬುದನ್ನು ಕಾದುನೋಡಿ’ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ, ಶ್ರೀ ಎಸ್‌. ನಿಜಲಿಂಗಪ್ಪನವರು ಇಂದು ನೀಡಿದ ಹಿತೋಕ್ತಿ.

ಮೈಸೂರು ರಾಜ್ಯವೂ ಮದರಾಸಿನಂತೆ ದ್ವಿಭಾಷಾ ಸೂತ್ರವನ್ನು ಅನುಸರಿಸಬೇಕೆಂದು ನಗರದಲ್ಲಿ ವಿದ್ಯಾರ್ಥಿಗಳು ಒತ್ತಾಯಪಡಿಸುತ್ತಿದ್ದಾರೆಂಬ ಅಂಶ

ವನ್ನು ಬರದಿಗಾರರು ಇಂದು ನಗರಕ್ಕೆ ಹಿಂತಿರುಗಿದ ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ ಮುಖ್ಯಮಂತ್ರಿಯವರು ಮೇಲಿನಂತೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry