ಕಾಮನ್‌ವೆಲ್ತ್ ಶೂಟಿಂಗ್‌: ಜಿತು, ಗಗನ್‌ಗೆ ಸ್ಥಾನ

7

ಕಾಮನ್‌ವೆಲ್ತ್ ಶೂಟಿಂಗ್‌: ಜಿತು, ಗಗನ್‌ಗೆ ಸ್ಥಾನ

Published:
Updated:

ನವದೆಹಲಿ: ಜಿತು ರಾಯ್‌, ಗಗನ್ ನಾರಂಗ್‌, ಅಪೂರ್ವಿ ಚಾಂಡೇಲಾ ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಪ್ರಕಟಗೊಂಡ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುವ ಕ್ರೀಡಾಕೂಟಕ್ಕೆ 27 ಶೂಟರ್‌ಗಳ ತಂಡವನ್ನು ಅಂತಿಮಗೊಳಿಸಿದೆ. ಇದರಲ್ಲಿ 25 ಪುರುಷ ಹಾಗೂ 12 ಮಹಿಳಾ ಸ್ಪರ್ಧಿಗಳು ಇದ್ದಾರೆ.

ಪುರುಷರ ವಿಭಾಗದಲ್ಲಿ ಗಗನ್‌, ಜಿತು ಸೇರಿದಂತೆ ಸಂಜೀವ್ ರಜಪೂತ್‌, ಚೈನ್ ಸಿಂಗ್‌, ದೀಪಕ್‌ ಕುಮಾರ್‌, ನೀರಜ್ ಕುಮಾರ್‌, ಅಂಕುರ್ ಮಿತ್ತಲ್‌ ಕೂಡ ಇದ್ದಾರೆ. ಮಹಿಳೆಯರ ವಿಭಾಗದಲ್ಲಿ ಅಪೂರ್ವಿ ಸೇರಿದಂತೆ ತೇಜಸ್ವಿನಿ ಸಾವಂತ್‌, ಹೀನಾ ಸಿಧು, ಅನ್ನುರಾಜ್ ಸಿಂಗ್‌, ಸೀಮಾ ತೋಮರ್‌, ಶ್ರೇಯಸಿ ಸಿಂಗ್ ಕೂಡ ಅವಕಾಶ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry