ಕನ್ನಡ ಕಡ್ಡಾಯ: ಖಾಸಗಿ ಶಾಲೆಗಳಿಗೆ ಗಡುವು

7

ಕನ್ನಡ ಕಡ್ಡಾಯ: ಖಾಸಗಿ ಶಾಲೆಗಳಿಗೆ ಗಡುವು

Published:
Updated:

ಬೆಂಗಳೂರು: ಕನ್ನಡವನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಬೋಧಿಸುವ ಸಂಬಂಧ ಖಾಸಗಿ ಶಾಲೆಗಳು ತಮ್ಮ ಒಪ್ಪಿಗೆಯನ್ನು ಫೆಬ್ರುವರಿ 10ರ ಒಳಗೆ ತಿಳಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮವನ್ನು ಹೊಂದಿರುವ ಶಾಲೆಗಳೂ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಲೇಬೇಕು.

ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಭಾಷೆಯ ಕಡ್ಡಾಯ ಕಲಿಕೆ ಜಾರಿಗೆ ಬರಲಿದೆ. ಎಲ್ಲ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ 1 ಮತ್ತು 2 ನೇ ತರಗತಿಯಿಂದ ಕನ್ನಡ ಭಾಷೆಯನ್ನು ಕಲಿಸಬೇಕು. ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸರ್ಕಾರದ ಈ ಕ್ರಮವನ್ನು ಟೀಕಿಸಿವೆ.

ಖಾಸಗಿ ಶಾಲೆಗಳು ಕನ್ನಡವನ್ನು ಪ್ರಥಮ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಲು ಬಯಸುತ್ತವೆ ಎಂಬುದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ತಿಳಿಸಬೇಕು. ಇದಕ್ಕೆ ಅನುಗುಣವಾಗಿ ಇಲಾಖೆ ಪಠ್ಯ ಪುಸ್ತಕ ಪೂರೈಸಲು ಕ್ರಮ ತೆಗೆದುಕೊಳ್ಳುತ್ತವೆ.

‘ಕೆಲವು ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಸಮಸ್ಯೆ ಇರುವುದು ನಿಜ. ಅವರಿಗೆ ಸಹಕರಿಸಲು ಸರ್ಕಾರ ಸಿದ್ಧವಿದೆ. ಒಂದು ವೇಳೆ ನಿರಾಕರಿಸಿದರೆ ಕನ್ನಡ ಕಲಿಕೆ ಕಾಯ್ದೆಯಡಿ ಶಾಲಾ ಮಾನ್ಯತೆಯನ್ನು ರದ್ದುಗೊಳಿಸಬೇಕಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry