ಅಂಪೈರ್‌ ಜತೆಗೆ ವಾಗ್ವಾದ: ಅಂಬಾಟಿ ರಾಯುಡುಗೆ ಎರಡು ಪಂದ್ಯಗಳ ನಿಷೇಧ ವಿಧಿಸಿದ ಬಿಸಿಸಿಐ

7

ಅಂಪೈರ್‌ ಜತೆಗೆ ವಾಗ್ವಾದ: ಅಂಬಾಟಿ ರಾಯುಡುಗೆ ಎರಡು ಪಂದ್ಯಗಳ ನಿಷೇಧ ವಿಧಿಸಿದ ಬಿಸಿಸಿಐ

Published:
Updated:
ಅಂಪೈರ್‌ ಜತೆಗೆ ವಾಗ್ವಾದ: ಅಂಬಾಟಿ ರಾಯುಡುಗೆ ಎರಡು ಪಂದ್ಯಗಳ ನಿಷೇಧ ವಿಧಿಸಿದ ಬಿಸಿಸಿಐ

ಮುಂಬೈ: ಸೈಯದ್ ಮುಷ್ತಾಕ್ ಟ್ವೀಟಿ– 20 ಕ್ರಿಕೆಟ್‌ ಟೂರ್ನಿಯಲ್ಲಿ ಅಂಪೈರ್‌ ಜತೆಗೆ ವಾಗ್ವಾದ ನಡೆಸಿದ್ದ ಹೈದರಾಬಾದ್‌ ತಂಡದ ನಾಯಕ ಅಂಬಾಟಿ ರಾಯುಡು ಅವರಿಗೆ ಭಾರತೀಯ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಿನ ಎರಡು ಪಂದ್ಯಗಳಿಗೆ ನಿಷೇಧ ವಿಧಿಸಿದೆ.

ಅಂಬಾಟಿ ರಾಯುಡು ಅವರು ಬಿಸಿಸಿಐನ ‘ನೀತಿ ಸಂಹಿತೆ’ ಉಲ್ಲಂಘನೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹಾಗಾಗಿ ಫೆ. 5 ಮತ್ತು 6ರಂದು ಆರಂಭವಾಗಲಿರುವ ವಿಜಯ್‌ ಹಜಾರೆ ಟ್ರೋಫಿಯ ಸರ್ವಿಸ್ಸ್‌ ಮತ್ತು ಜಾರ್ಖಂಡ್‌ ವಿರುದ್ಧ ನಡೆಯುವ ಪಂದ್ಯಗಳಿಗೆ ತಂಡದಿಂದ ಹೊರಬಿದಿದ್ದಾರೆ.

ಈ ಪಂದ್ಯದಲ್ಲಿ ಹೈದರಾಬಾದ್‌ ತಂಡದ ವಿರುದ್ಧ ಕರ್ನಾಟಕ 2 ರನ್‌ಗಳಿಂದ ಗೆಲುವು ಸಾಧಿಸಿತ್ತು.

ಇತ್ತೀಚಿಗೆ ನಡೆದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅಂಬಾಟಿ ರಾಯುಡು ಅವರನ್ನು ಸಿಎಸ್‌ಕೆ ತಂಡ ₹2.20 ಕೋಟಿಗೆ ಖರೀದಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry