ಗೂಢಚರ್ಯೆ ಆರೋಪ: ವಾಯುಪಡೆ ಅಧಿಕಾರಿ ವಶಕ್ಕೆ

7

ಗೂಢಚರ್ಯೆ ಆರೋಪ: ವಾಯುಪಡೆ ಅಧಿಕಾರಿ ವಶಕ್ಕೆ

Published:
Updated:

ನವದೆಹಲಿ: ರಹಸ್ಯ ದಾಖಲೆಗಳನ್ನು ಮಹಿಳೆಯೊಬ್ಬರಿಗೆ ನೀಡಿದ ಆರೋಪದಲ್ಲಿ ಭಾರತೀಯ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕೇಂದ್ರ ಕಚೇರಿಯಲ್ಲಿ ನಿಯೋಜಿಸಲಾಗಿದ್ದ ಅಧಿಕಾರಿಯನ್ನು ವಾಯುಪಡೆಯ ಗೂಢಚರ್ಯೆ ತಡೆ ವಿಭಾಗದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಈ ಅಧಿಕಾರಿಯು ಮಹಿಳೆಯೊಬ್ಬರ ಜತೆ ಫೇಸ್‌ಬುಕ್‌ ಮೂಲಕ ಗೆಳೆತನ ಬೆಳೆಸಿದ್ದರು. ಅವರ ಸ್ನೇಹ ವಾಟ್ಸ್‌ಆ್ಯಪ್‌ನಲ್ಲಿ ಮುಂದುವರಿದಿತ್ತು. ಅಧಿಕಾರಿಯ ಸೇವಾ ಜ್ಯೇಷ್ಠತೆ ಮತ್ತು ಕೇಂದ್ರ ಕಚೇರಿಯಲ್ಲಿ ಅವರು ಇದ್ದುದರಿಂದ ರಹಸ್ಯ ಮಾಹಿತಿಗಳು ಅವರಿಗೆ ದೊರೆಯುತ್ತಿದ್ದವು. ಅವುಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಮಹಿಳೆಗೆ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಯು ‘ಹನಿಟ್ರ್ಯಾಪ್‌’ಗೆ ಒಳಗಾಗಿರಬಹುದು ಎಂಬ ಶಂಕೆಯೂ ಇದೆ. 

ಗೂಢಚರ್ಯೆ ತಡೆ ಮೇಲ್ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಯ ಅನಪೇಕ್ಷಿತ ಚಟುವಟಿಕೆಗಳು ಬಹಿರಂಗವಾದವು. ಅನಧಿಕೃತ ವಿದ್ಯುನ್ಮಾನ ಸಾಧನಗಳನ್ನು ಬಳಸುವುದಕ್ಕೆ ನಿಷೇಧ ಇದ್ದರೂ ಅಂಥವುಗಳನ್ನು ಈ ಅಧಿಕಾರಿ ಬಳಸುತ್ತಿದ್ದರು ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry